Site icon PowerTV

ಗಾಯಾಳು ವಿದ್ಯಾರ್ಥಿ ನೆರವಿಗೆ ಧಾವಿಸಿದ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ : ಅಪಘಾತವೊಂದರಲ್ಲಿ ನರಳಾಡುತ್ತಿದ್ದ ಬಾಲಕನ ನೇರವಿಗೆ ಧಾವಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಘಟನೆ ಜಿಲ್ಲೆಯ ಕಾಪು ತಾಲೂಕಿನ ಮಣಿವೂರಿನ ರಸ್ತೆಯಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಿದ್ಯಾರ್ಥಿಯೋರ್ವನಿಗೆ ಕಾರುವೊಂದು ಡಿಕ್ಕಿ ಹೊಡೆದು ಅಪಘಾತ ನಡೆದಿತ್ತು. ಈ ವೇಳೆ ಅದೇ ಮಾರ್ಗದಲ್ಲಿ ಕಾರ್ಯಕ್ರಮ ಮುಗಿಸಿ ಬರುತ್ತಿದ್ದ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅಪಘಾತದಿಂದ ನರಳುತ್ತಿದ್ದ ಬಾಲಕನ ನೆರವಿಗೆ ಧಾವಿಸಿದ ಸಚಿವೆ.

ಇದನ್ನು ಓದಿ : ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಕದೀಮರು ; 30 ಲಕ್ಷ ಮದ್ಯ ಜಪ್ತಿ

ಬಳಿಕ ವಿದ್ಯಾರ್ಥಿಯನ್ನು ಸಂತೈಸಿ ಆಟೋ ಒಂದರಲ್ಲಿ ವಿದ್ಯಾರ್ಥಿಯನ್ನು ಕೂರಿಸಿ ಆಸ್ಪತ್ರೆಗೆ ಸಾಗಿಸಲು ಸಹಾಯ ನೀಡಿದರು. ಈಗೇ ಕಳೆದ ಬಾರಿ ಚಾಮರಾಜನಗರದಲ್ಲಿ ಇದೆ ರೀತಿಯ ಅಪಘಾತಕ್ಕೆ ಸಚಿವೆ ಸ್ಪಂದನೆಯನ್ನು ನೀಡಿದ್ದರು. ಅಂದು ಇಬ್ಬರು ಯುವಕರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದ ಸಚಿವೆ, ಇಂದು ಇನ್ನೊಬ್ಬ ಬಾಲಕನ ನೇರವಿಗೆ ಸ್ಪಂದಿಸಿದ್ದಾರೆ.

ಕಾಪುನಲ್ಲಿ ವಿದ್ಯಾರ್ಥಿಯ ನೆರವಿಗೆ ಧಾವಿಸಿದ್ದ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದ ಸ್ಥಳೀಯರು.

Exit mobile version