Site icon PowerTV

ರಂಗನಾಥಸ್ವಾಮಿ ವಿಶೇಷ ಪೂಜೆ; H.D ದೇವೇಗೌಡ್ರು ಕುಟುಂಬ ಭಾಗಿ

ಹಾಸನ : ಶ್ರಾವಣ ಮಾಸದ ಹಿನ್ನೆಲೆ ರಂಗನಾಥಸ್ವಾಮಿ ದೇವಾಲಯದ ಪೂಜೆಯಲ್ಲಿ ಭಾಗಿಯಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಕುಟುಂಬ.

ಹೊಳೆನರಸೀಪುರ ತಾಲೂಕಿನಲ್ಲಿರುವ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ ಶ್ರಾಮಣ ಮಾಸದ ಪೂಜೆಯ ಹಿನ್ನೆಲೆ ಪುತ್ರ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸೊಸೆ ಭವಾನಿ ರೇವಣ್ಣ ಹಾಗೂ ಮೊಮ್ಮಗ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಕುಟುಂಬ ಸಮೇತ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.

ಇದನ್ನು ಓದಿ : ರಜನಿಕಾಂತ್​ಗೆ ಹೊಸ BMW ಕಾರ್ ಗಿಫ್ಟ್ ಕೊಟ್ಟ ಜೈಲರ್ ಪ್ರೊಡ್ಯೂಸರ್

ಅಷ್ಟೇ ಅಲ್ಲದೆ ಪೂಜೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ್ರು ಮತ್ತು ಅವರ ಪತ್ನಿ ಚನ್ನಮ್ಮ ಅವರು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು. ಆದರೆ ಈ ಭಾರಿ ಪೂಜೆಯಲ್ಲಿ ಮಿಸ್ ಆಗಿರೋ ಪ್ರಜ್ವಲ್ ರೇವಣ್ಣ.

ಮೊನ್ನೆ ನಡೆದ ಸಂಸದ ಸ್ಥಾನದಿಂದ ಅನರ್ಹವಾಗಿರೋ ವಿಚಾರದಿಂದ ಟೆಂಕ್ಷನ್ ಆಗಿರೋ ಪ್ರಜ್ವಲ್ ರೇವಣ್ಣ ಅವರು ವಕೀಲರೊಂದಿಗೆ ಸಂಪರ್ಕ ಮಾಡೋದಕ್ಕೆ ಬೆಂಗಳೂರಿಗೆ ತೆರಳಿದ್ದಾರೆ.

Exit mobile version