Site icon PowerTV

ಸೂರ್ಯಯಾನ ಯಶಸ್ವಿ ಉಡಾವಣೆಯಾಗೆ ಶುಭ ಕೋರಿದ ಡಿಸಿಎಂ ಡಿಕೆಶಿ!

ಬೆಂಗಳೂರು : ಸೂರ್ಯನ ಅಧ್ಯಯನಕ್ಕಾಗಿ ಇಂದು ಇಸ್ರೋದಿಂದ ಸೂರ್ಯಯಾನ ಆದಿತ್ಯ ಎಲ್ ೧ ಉಡಾವಣೆ ಹಿನ್ನೆಲೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಶುಭಕೋರಿದರು.

ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ ಇಡೀ ಭಾರತಕ್ಕೆ ಗೌರವ ತರೋ ಕೆಲಸ ನಮ್ಮ ಇಸ್ರೋ ತಂಡದ ವಿಜ್ಞಾನಿಗಳು ಮಾಡ್ತಾ ಇದಾರೆ. ದೊಡ್ಡ ಪ್ರಯೋಗ, ಪ್ರಯತ್ನ, ಸಾಹಸಕ್ಕೆ ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ.

ಇಡೀ ದೇಶದ ಜನ ಅವರಿಗಾಗಿ ಪ್ರಾರ್ಥನೆ ಮಾಡ್ತಾ ಇದ್ದಾರೆ. ಇಡೀ ವಿಶ್ವದಲ್ಲೇ ನಮ್ಮ ಇಸ್ರೋ ಬಹಳ ಶ್ರಮದಿಂದ ಮುನ್ನುಗ್ಗುತ್ತಿದೆ. ಇಸ್ರೋದ ಎಲ್ಲರೂ ಕೂಡ ಅವರ ಸಂಪೂರ್ಣವಾದ ಜ್ಞಾನಭಂಡಾರದಿಂದ ಅವರ ಅನುಭವದಿಂದ ಒಳ್ಳೆ ಕೆಲಸ ಮಾಡ್ತಿದ್ದಾರೆ ಎಂದು ಶ್ಲಾಘಿಸಿದರು.

Exit mobile version