Site icon PowerTV

‘ಜೀರೋ ಬಿಲ್, ಜೀರೋ ಕರೆಂಟ್’ ಹೊಸ ಗ್ಯಾರಂಟಿಯೇ? : ಕಟೀಲ್ ವ್ಯಂಗ್ಯ

ಬೆಂಗಳೂರು : ಕಾಂಗ್ರೆಸ್​ ಸರ್ಕಾರದಲ್ಲಿ ಪವರ್ ಇಲ್ಲ, ವಿದ್ಯುತ್ ದರ ಏರಿಕೆಗೆ ಕೊನೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕುರಿತು ಟ್ವೀಟ್ ಮಾಡಿರುವ ಅವರು, ಜೀರೋ ಬಿಲ್.. ಜೀರೋ ಕರೆಂಟ್ ಹೊಸ ಗ್ಯಾರಂಟಿಯೇ? ಎಂದು ಕುಟುಕಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರು, ವಿದ್ಯುತ್​ ಬೆಲೆ ದುಬಾರಿ ಮಾಡಿದ್ದಾರೆ. ಆ ಮೂಲಕ, ಬೆಂಗಳೂರು ಉಸ್ತುವಾರಿ, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮೇಲಿನ ಹಗೆಯನ್ನು ಬೆಂಗಳೂರಿನ ಜನತೆಯ ಮೇಲೆ ತೀರಿಸಿಕೊಳ್ಳಲು ಹೊರಟಂತಿದೆ ಎಂದು ಛೇಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಹಬ್ಬದ ಸಂದರ್ಭದಲ್ಲಿ ಸಿಲಿಂಡರ್ ದರ ಇಳಿಕೆ ಮಾಡಿ ದೇಶದ ಜನತೆಗೆ ನೆರವಾದರು. ಆದರೆ, ರಾಜ್ಯದ ಎಟಿಎಂ ಸರ್ಕಾರವು (ATM Sarkara) ಪದೇ ಪದೆ ವಿದ್ಯುತ್ ದರ ಏರಿಕೆ ಮಾಡುತ್ತಾ ತನ್ನ ಜನ ವಿರೋಧಿ ನೀತಿ ಮುಂದುವರಿಸಿದೆ. ಬಳಕೆಗೆ ವಿದ್ಯುತ್ ಇಲ್ಲ, ದರ ಏರಿಕೆ ಮಾತ್ರ ನಿಲ್ಲಲ್ಲ ಎಂಬ ಹೊಸ ಗ್ಯಾರಂಟಿ ಜಾರಿಮಾಡಿದೆ ಈ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version