Site icon PowerTV

ಈ ಬಾರಿ ದಸಾರಗೆ ‘ಅಂಜನ್’ ಹೊಸ ಆನೆ ಸೇರ್ಪಡೆ : ಈಶ್ವರ್ ಖಂಡ್ರೆ

ಮೈಸೂರು : ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರುತ್ತದೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಘೋಷಣೆ ಮಾಡಿದರು.

ಮೈಸೂರು ಜಿಲ್ಲೆಯ ವೀರನ ಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಚಾಲನೆ ನೀಡಿದ ಬಳಿಕ‌ ಮಾತನಾಡಿದ ಅವರು, ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ಕೊಟ್ಟಿದ್ದೇವೆ. ಐತಿಹಾಸಿಕ ದಸರಾ ಪ್ರಾರಂಭವಾಗಿದೆ ಎಂದರು.

ಕಾಡಿನಿಂದ ನಾಡಿಗೆ ಆನೆಗಳು ತೆರಳುತ್ತವೆ. ಈ ಬಾರಿ ದಸಾರಗೆ ಅಂಜನ್ ಎಂಬ ಹೊಸ ಆನೆ ಸೇರ್ಪಡೆಯಾಗಿದೆ. ಒಂದುವರೆ ತಿಂಗಳು ದಸರಾ ಗಜಪಡೆಗಳು ತಾಲೀಮಿನಲ್ಲಿ ಭಾಗಿಯಾಗುತ್ತದೆ. ನಿಶಾನೆ ಆನೆಯನ್ನು ಇನ್ನೂ ನಿರ್ಧಾರ ಮಾಡಿಲ್ಲ. ನಾಡ ಅಧಿದೇವತೆ ಚಾಮುಂಡಿ ತಾಯಿಯ ಆಶೀರ್ವಾದ ಎಲ್ಲರ ಮೇಲೆ ಇರಲಿ ಎಂದು ಹೇಳಿದರು.

ಸರ್ಕಾರದಿಂದ ಕುಟುಂಬಕ್ಕೆ ಪರಿಹಾರ

ಆನೆ ದಾಳಿಗೆ ಶಾರ್ಪ್ ಶೂಟರ್ ಸಾವು ಪ್ರಕರಣ ಕುರಿತು ಮಾತನಾಡಿದ ಅವರು, ಪ್ರಕರಣದ ತನಿಖೆಗೆ ಆದೇಶ ನೀಡಿದ್ದೇನೆ. ಬಹಳ ದೊಡ್ಡ ದುರಂತ ಆಗಿದೆ. ಅರಣ್ಯ ಇಲಾಖೆಗೆ ದೊಡ್ಡ ಹಾನಿಯಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಕುಟುಂಬಕ್ಕೆ ಪರಿಹಾರ ನೀಡಲಾಗುವುದು. ಸರ್ಕಾರ ಕುಟುಂಬಸ್ಥರ ಪರವಾಗಿ ನಿಲ್ಲುತ್ತದೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.

Exit mobile version