Site icon PowerTV

ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು

ಬೆಂಗಳೂರು : ಸುತ್ತೂರು ಶ್ರೀಗಳು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು.

ಹೆಚ್​ಡಿಕೆ ಭೇಟಿ ಬಳಿಕ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಆಸ್ಪತ್ರೆಗೆ ಬಂದಾಗ ಚೆಕ್ ಮಾಡಿದ್ದಾರೆ. ಈಗ ಆರೋಗ್ಯವಾಗಿದ್ದಾರೆ. ಲವಲವಿಕೆ ಇಂದ ಇದಾರೆ ಎಂದರು.

ನಾನು ಹೋದಾಗ ಪೇಪರ್ ಓದುತ್ತಾ ಕುಳಿತಿದ್ದರು. ನಿಖಿಲ್ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಕೂಡ ಅಲ್ಲೇ ಇದ್ರು. ಅವರು ಕೂಡ ಭೇಟಿಯಾಗಿದ್ರು. ಡಾಕ್ಟರ್ ಸತೀಶ್ ಚಂದ್ರ ಕೂಡ ಮೊದಲಿನಿಂದಲೂ ಪರಿಚಯ. ಕುಮಾರಸ್ವಾಮಿ ಆರೋಗ್ಯದಲ್ಲಿ ಏನು ತೊಂದರೆ ಇಲ್ಲ ಎಂದು ಹೇಳಿದರು.

ಏನೂ ಇಲ್ಲದೆ ರಿಕವರ್ ಆಗ್ತಾರೆ

ಇವತ್ತು ಕುಮಾರಸ್ವಾಮಿ ಅವರನ್ನು ಡಿಸ್ಚಾರ್ಜ್​ ಮಾಡೋರಿದ್ರು. ಆದ್ರೆ, ನಾಳೆ ಮಾಡಲಿದ್ದಾರೆ. ತುಂಬಾ ಹೊತ್ತು ನನ್ನೊಂದಿಗೆ ಮಾತನಾಡಿದ್ರು. ಏನೂ ಇಲ್ಲದೆ ರಿಕವರ್ ಆಗ್ತಾರೆ. ನಾವು ಡಾಕ್ಟರ್ ಬಳಿ ಚರ್ಚೆ ಮಾಡಿದ್ದೇನೆ ಎಂದು ಸುತ್ತೂರು ಶ್ರೀಗಳು ಮಾಹಿತಿ ನೀಡಿದರು.

Exit mobile version