Site icon PowerTV

ಸಾಲುಮರದ ತಿಮ್ಮಕ್ಕನ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್​

ಬೆಂಗಳೂರು : ಇತ್ತೀಚೆಗೆ ಜಾರಿಬಿದ್ದು ಬೆನ್ನು ಸಮಸ್ಯೆಯಿಂದ ನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಲುಮರದ ತಿಮ್ಮಕ್ಕ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ತಮ್ಮ ಮೆನೆಯಲ್ಲಿ ಕಾಲುಜಾರಿ ಬಿದ್ದು ಸೊಂಟಕ್ಕೆ ತೀವ್ರವಾಗಿ ಪೆಟ್ಟಾಗಿದ್ದ ಹಿನ್ನೆಲೆ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಕಳೆದ 25 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು, 112 ವರ್ಷದ ಹಿರಿಯ ಜೀವಿ ತಿಮ್ಮಕ್ಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಹಿನ್ನೆಲೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಗಿದೆ.

ಇದನ್ನೂ ಓದಿ:ಮಾಜಿ ಕ್ರಿಕೆಟಿಗ ಸಚಿನ್​ ತೆಂಡುಲ್ಕರ್​ ಮನೆ ಮುಂದೆ ಪ್ರತಿಭಟನೆ!

ಇಂದು ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲುಮರದ ತಿಮ್ಮಕ್ಕನ ಆರೋಗ್ಯ ವಿಚಾರಿಸಿದರು. ಕೃಷಿ ಸಚಿವರಾದ ಚಲುವರಾಯಸ್ವಾಮಿ ಮತ್ತು ಸಚಿವ ಶಿವರಾಜ್​ ತಂಗಡಗಿ ಆಸ್ಪತ್ರೆ ವೈದ್ಯರು ಇದ್ದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ನೇರವಾಗಿ ಜಾಲಹಳ್ಳಿಯ ತಮ್ಮ ನಿವಾಸಕ್ಕೆ ತೆರಳಲಿರುವ ಅವರಿಗೆ ಎರಡು ವಾರಗಳ ಬೆಡ್ ರೆಸ್ಟ್ ಗೆ ವೈದ್ಯರು ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಆದಿಚುಂಚನಗಿರಿ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ತಿಮ್ಮಕ್ಕನವರ ಆರೋಗ್ಯ ವಿಚಾರಿಸಿದ್ದು

Exit mobile version