Site icon PowerTV

HDK ಚೇತರಿಕೆಗಾಗಿ ಕಾರ್ಯಕರ್ತರು ದೇವರ ಮೊರೆ

ಮಂಡ್ಯ : ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ಚೇತರಿಕೆಗಾಗಿ ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿ ಚೇತರಿಕೆಗಾಗಿ ಮುತ್ತುರಾಯನ ದೇಗುಲದಲ್ಲಿ ಪೂಜೆ ಮಾಡಿದ್ದಾರೆ. ಕೆ.ಆರ್.ಪೇಟೆ ಜೆಡಿಎಸ್ ಶಾಸಕ ಎಚ್.ಟಿ ಮಂಜು ನೇತೃತ್ವದಲ್ಲಿ ಪೂಜೆ ಮಾಡಲಾಯಿತು. ಮುತ್ತುರಾಯ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಆದಷ್ಟು ಬೇಗ ಕುಮಾರಸ್ವಾಮಿ ಅವರು ಗುಣಮುಖರಾಗಲಿ. ನಮ್ಮ ನಾಯಕರು ಜನರ ಹಿತ ಕಾಯುವ ನಾಯಕನಿಗೆ ದೇವರು ಆರೋಗ್ಯ ವೃದ್ದಿಸಲಿ ಎಂದು ಪ್ರಾರ್ಥಿಸಿದ್ದಾರೆ.

ಹೆಚ್​ಡಿಕೆ ಸ್ವಕ್ಷೇತ್ರದಲ್ಲಿ ಪೂಜೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಶೀಘ್ರ ಗುಣಮುಖವಾಗಲಿ ಎಂದು ಹೆಚ್​ಡಿಕೆ ಸ್ವಕ್ಷೇತ್ರ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಜೆಡಿಎಸ್ ಮುಖಂಡರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಕೆಂಗಲ್ ದೇವಾಲಯದ ಮುಂದೆ 101 ಇಡುಗಾಯಿ ಹೊಡೆದಿದ್ದಾರೆ. ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ, ಆರೋಗ್ಯದಲ್ಲಿ ಚೇತರಿಕೆ ಕಂಡು ರಾಜಕೀಯಕ್ಕೆ ಮರಳಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Exit mobile version