Site icon PowerTV

ಮಾಜಿ ಕ್ರಿಕೆಟಿಗ ಸಚಿನ್​ ತೆಂಡುಲ್ಕರ್​ ಮನೆ ಮುಂದೆ ಪ್ರತಿಭಟನೆ!

ಮುಂಬೈ: ಆನ್​ಲೈನ್​ ಗೇಮಿಂಗ್​ ಜಾಹಿರಾತಿನಲ್ಲಿ ಕ್ರಿಕೆಟ್​ ಲೆಜೆಂಡ್​ ಸಚಿನ್ ತೆಂಡೂಲ್ಕರ್ ಕಾಣಿಸಿಕೊಂಡಿರುವುನ್ನು ವಿರೋಧಿಸಿ ಅವರ ನಿವಾಸದ ಎದುರು ಇಲ್ಲಿನ ಶಾಸಕರು ಮತ್ತು ಅವರ ಬೆಂಬಲಿಗರಿಂದ ಪ್ರತಿಭಟನೆ ನಡೆದಿದೆ.

ಯುವಕರನ್ನು ದಾರಿತಪ್ಪಿಸುತ್ತಿರುವ ಆನ್‌ಲೈನ್ ಗೇಮ್ ಅನ್ನು ಪ್ರೋತ್ಸಾಹಿಸುತ್ತಿರುವ ಸಚಿನ್ ಅವರು ತಮ್ಮ ಭಾರತ ರತ್ನ ಪುರಸ್ಕಾರವನ್ನು ವಾಪಸ್ ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದ್ದಾರೆ.

ಬಾಂದ್ರಾದಲ್ಲಿರುವ ಸಚಿನ್​ ತೆಂಡುಲ್ಕರ್​ ಅವರ ನಿವಾಸದ ಎದುರು ಶಾಸಕ ಬಚ್ಚು ಕಡು ಮತ್ತು ಬೆಂಬಲಿಗರು ಗುರುವಾರ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬೆಂಬಲಿಗ ಹಾಗೂ ಪ್ರಹಾರ್ ಜನಶಕ್ತಿ ಪಕ್ಷದ ಶಾಸಕರಾಗಿರುವ ಬಚ್ಚು ಮತ್ತು ಇತರ 22 ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಎಲ್ಲರನ್ನು ಪೊಲೀಸರು ಬಂಧಿಸಿದ್ದಾರಲ್ಲದೇ ಸಚಿನ್ ನಿವಾಸದ ಬಳಿಯಿಂದ ಬೇರೆಡೆಗೆ ಕರೆದೊಯ್ದಿದ್ದಾರೆ ಮತ್ತು ಪ್ರತಿಭಟನಕಾರರ ವಿರುದ್ಧ ಪ್ರಕಣ ದಾಖಲಾಗಿದೆ.

Exit mobile version