Site icon PowerTV

ಚಲಿಸುವ ರೈಲಿನಲ್ಲೇ ಗರ್ಭಿಣಿ ಪ್ರಸವ : ಮಹಿಳಾ ಪ್ರಯಾಣಿಕರಿಂದ ಹೆರಿಗೆ

ಚಿಕ್ಕಬಳ್ಳಾಪುರ : ರೈಲಿನಲ್ಲಿ ಚಲಿಸುವಾದ ಇದ್ದಕ್ಕಿದ್ದಂತೆ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅವಳಿ ಮಕ್ಕಳಿಗೆ ಜನ್ಮನೀಡಿದ ಘಟನೆ ಗುರುವಾರ ಮಧ್ಯರಾತ್ರಿ ಗೌರಿಬಿದನೂರು ಮಾರ್ಗ ಮಧ್ಯದಲ್ಲಿ ನಡೆದಿದೆ.

ಗುಲ್ಬರ್ಗಾ ಮೂಲದ ಚಂದ್ರಮ್ಮ  ರೈಲಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ. ಬೆಂಗಳೂರಿನಿಂದ ಗುಲ್ಬರ್ಗಾದ ಕಡೆ ಹೋಗುತಿದ್ದ ನಾಂದೇಡ್ ಎಕ್ಸ್​ಪ್ರೆಸ್​ ನಲ್ಲಿ ಘಟನೆ ನಡೆದಿದೆ. ಬೆಂಗಳೂರಿನಿಂದ ಯಲಹಂಕ ಸಮೀಪಿಸುತಿದ್ದಂತೆ ಚಂದ್ರಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ: ವೀರೇಂದ್ರ ಹೆಗ್ಗಡೆ ವಿರುದ್ಧ ಹೇಳಿಕೆಗೆ ತಡೆ ಆದೇಶ ಪಾಲಿಸಿ: ಹೈಕೋರ್ಟ್​

ರೈಲಿನಲ್ಲಿ ಯಾವುದೆ ವೈದ್ಯಕೀಯ ಸೌಲಭ್ಯಗಳಿಲ್ಲದಿದ್ದರು ಹೆರಿಗೆ ನೋವಿನ ಗಂಭೀರತೆಯನ್ನು ಅರಿತ ಮಹಿಳಾ ಪ್ರಯಾಣಿಕರು ಸುರಕ್ಷಿತವಾಗಿ ಹೆರಿಗೆ ಮಾಡಿಸಿ ಅವಳಿ ಗಂಡು ಮಕ್ಕಳಿಗೆ ಜನ್ಮನೀಡುವ ಮೂಲಕ  ಮಾನವೀಯತೆ ಮೆರೆದದ್ದಾರೆ .

ಗೌರಿಬಿದನೂರು ನಿಲ್ದಾಣ  ಸಮೀಪಿಸುತಿದ್ದಂತೆ ಯಶಸ್ವಿಯಾಗಿ  ಹೆರಿಗೆಯಾಗಿದ್ದು  ಇಬ್ಬರು ಗಂಡು ಮಕ್ಕಳು ಮತ್ತು ಮಹಿಳೆ ಸುರಕ್ಷಿತವಾಗಿದ್ದಾರೆ.  ಸದ್ಯ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳಿಗೆ  ಚಿಕಿತ್ಸೆ ನೀಡಲಾಗುತ್ತಿದೆ.

Exit mobile version