Site icon PowerTV

ಆಸ್ಪತ್ರೆಯಲ್ಲಿದ್ದೇ ಕಾವೇರಿ ಹೋರಾಟಕ್ಕೆ ಕರೆ ಕೊಟ್ಟ ಕುಮಾರಸ್ವಾಮಿ

ಬೆಂಗಳೂರು : ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಕಾವೇರಿ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.

ನಾಳೆಯಿಂದ ಮಂಡ್ಯದಲ್ಲಿ ಜೆಡಿಎಸ್ ನಿಂದ ಕಾವೇರಿ ಚಳವಳಿ ನಡೆಯಲಿದೆ. ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದ ಮಳವಳ್ಳಿ ಮಾಜಿ ಶಾಸಕ ಅನ್ನದಾನಿಗೆ ದಳಪತಿ ಸೂಚನೆ ನೀಡಿದ್ದಾರೆ.

ಹೆಚ್​ಡಿಕೆ ಭೇಟಿ ಬಳಿಕ ಮಾತನಾಡಿರುವ ಅನ್ನದಾನಿ ಅವರು, ಸದ್ಯದ ಕಾವೇರಿ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಿದ್ರು. ಅರ್ಧಗಂಟೆಗೂ ಹೆಚ್ಚು ಕಾಲ ನನ್ನೊಟ್ಟಿಗೆ ಮಾತನಾಡಿದ್ದಾರೆ. ಆರೋಗ್ಯವಾಗಿದ್ದಾರೆ. ಕಾವೇರಿ ನೀರು ಉಳಿವಿಗಾಗಿ ಹೋರಾಟ ಶುರು ಮಾಡಿ ಅಂತ ಕರೆ ಕೊಟ್ಟಿದ್ದಾರೆ ಎಂದರು.

ನಾಳೆಯಿಂದ ಚಳವಳಿ ಆರಂಭ

ನಾಳೆ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ ದೇವೆಗೌಡರ ನೇತೃತ್ವದಲ್ಲಿ ಚಳುವಳಿ ಆರಂಭವಾಗಲಿದೆ. ಸದ್ಯದ ನೀರಿನ ಪರಿಸ್ಥಿತಿ ಬಹಳ ಕೆಟ್ಟದಾಗಿದೆ. ಮುಂದಿನ ದಿನಗಳಲ್ಲಿ ಮಂಡ್ಯ ಸೇರಿದಂತೆ ಬೆಂಗಳೂರಿಗೂ ನೀರಿನ ಅಭಾವ ಎದುರಾಗಲಿದೆ. ಹೀಗಾಗಿ, ಚಳವಳಿ ಅಗತ್ಯವಿದೆ ಅಂತ ಕುಮಾರಣ್ಣ ಹೇಳಿದ್ದಾರೆ. ಅದರಂತೆ ನಾಳೆಯಿಂದ ಚಳವಳಿ ಆರಂಭಿಸಿತ್ತೇವೆ ಎಂದು ಹೇಳಿದರು.

Exit mobile version