Site icon PowerTV

ನಾಳೆ ಆಲಮಟ್ಟಿ ಜಲಾಶಯಕ್ಕೆ ಸಿಎಂ ರಿಂದ ಬಾಗೀನ ಅರ್ಪಣೆ!

ವಿಜಯಪುರ : ಜಿಲ್ಲೆಯ ಅಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ನಿಗದಿಯಾಗಿದ್ದು ಸೆ2 ರಂದು ಆಲಮಟ್ಟಿ ಲಾಲ್ ಬಹುದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ‌ ಅರ್ಪಣೆ ಮಾಡಲಿದ್ದಾರೆ.

ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಜಲಾಶಯಕ್ಕೆ ಬಾಗಿನ ಅರ್ಪಿಸಲು ನಿರ್ಧಾರ  ಮಾಡದ್ದಾರೆ. ಪ್ರತಿ ಬಾರಿ ಅಲಮಟ್ಟಿ ಭರ್ತಿಯಾದ ಬಳಿಕ ಅಂದು ಅಧಿಕಾರದಲ್ಲಿರುವ ಆಯಾ ಸರ್ಕಾರಗಳ ಮುಖ್ಯಮಂತ್ರಿಗಳು ಬಾಗಿನ‌ ಅರ್ಪಣೆ ಮಾಡಿಕೊಂಡು ಬಂದಿರುವುದು ವಾಡಿಕೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಹುಟ್ಟುಹಬ್ಬ ಆಚರಣೆಗೆ ಭರ್ಜರಿ ಸಿದ್ದತೆ!

ಈ ಬಾರಿ ಉತ್ತರ ಕರ್ನಾಟಕದಲ್ಲಿ ಮುಂಗಾರು ಕೊರತೆಯಿಂದ ಜಲಾಶಯವು ತಡವಾಗಿ ಭರ್ತಿಯಾಗಿದೆ. ತಡವಾಗಿಯಾದರೂ ಜಲಾಶಯಕ್ಕೆ ಬಾಗಿನ ಅರ್ಪಿಸಲು ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಾಗಿನ ಅರ್ಪಣೆ ನಂತರ ಕೃಷ್ಣೆಯ ಒಡಲ ಮಕ್ಕಳ ಅಳಲು ಆಲಿಸುವ ಸಾಧ್ಯತೆ ಇದೆ.

ಸಮರ್ಪಕ ಮುಂಗಾರು ಮಳೆ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತ್ತಿರೋ ಇಲ್ಲಿನ ರೈತರು ನಾಳೆ ಸಿಎಂ ಆಗಮನದ ಹಿನ್ನೆಲೆ, ಇಲ್ಲಿನ ಜನತೆ ವಿಜಯವಪುರವನ್ನು ಬರಪೀಡಿತ ಜಿಲ್ಲೆ ಘೋಷಣೆಗೆ ಒತ್ತಾಯ ಮಾಡಲಿದ್ದಾರೆ.

Exit mobile version