Site icon PowerTV

ಸೂರ್ಯ-ಚಂದ್ರ ಇರೋವರೆಗೂ ಭಾರತ ಮ್ಯಾಚ್ ಗೆಲ್ಲಲೇಬೇಕು : ಶಾಸಕ ಯತ್ನಾಳ್

ವಿಜಯಪುರ : ಸೂರ್ಯ, ಚಂದ್ರ ಇರುವವರೆಗೂ ಭಾರತ ಪಾಕಿಸ್ತಾನ ವಿರುದ್ಧ ಗೆಲ್ಲಲೇಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ನಾಳೆ ನಡೆಯಲಿರುವ ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯದ ಬಗ್ಗೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಕ್ರಿಕೆಟ್ ಅಭಿಮಾನಿ ಅಲ್ಲ. ನಾನು ಕ್ರಿಕೆಟ್ ಮ್ಯಾಚ್ ನೋಡಲ್ಲ. ಆದ್ರೂ, ದೇಶ ಭಕ್ತನಾಗಿ ಇಂಡಿಯಾ ಪ್ರತಿಯೊಂದು ಮ್ಯಾಚ್‌ನಲ್ಲಿ ಗೆಲವು ಸಾಧಿಸಬೇಕು ಅಂತ ಆಶಿಸುತ್ತೇನೆ ಎಂದರು.

ಕಾಂಗ್ರೆಸ್​ನ 40 ರಿಂದ 45 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿರುವ ಬಿ.ಎಲ್ ಸಂತೋಷ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಬಿ.ಎಲ್ ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ. ನಾನು ಮೊದಲೇ ಹೇಳಿಕೊಂಡು ಬಂದಿದ್ದೇನೆ, ಏನೋ ಗಡಿಬಿಡಿ ಇದೆ ಅಂತ. ಏನೋ ಗಡಿಬಿಡಿ ಇದೆ, ಈಗೇನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್​ನಿಂದ ಆಡಳಿತ ಪಕ್ಷದ ಬಹಳಷ್ಟು ಶಾಸಕರು ಅಸಮಾಧಾನ ಆಗಿದ್ದಾರೆ ಅಂತ ನನಗೆ ಅನಿಸುತ್ತೆ ಎಂದು ಹೇಳಿದರು.

ಇದನ್ನೂ ಓದಿ : ಇಂಡೋ-ಪಾಕ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್

ಅವ್ರಿಗೆ ಮಂತ್ರಿಗಳು ಬೆಲೆ ಕೊಡ್ತಿಲ್ಲ

ಅವ್ರಿಗೆ ಮಂತ್ರಿಗಳು ಬೆಲೆ ಕೊಡ್ತಿಲ್ಲ, ಅಭಿವೃದ್ಧಿಗೆ ಹಣ ಇಲ್ಲ. ಇವರ ಗ್ಯಾರೆಂಟಿಗಳಿಗೆ 52 ಸಾವಿರ ಕೋಟಿ ರೂ. ಬೇಕು. ಅದನ್ನು ಭರ್ತಿ ಮಾಡಲು ಇವ್ರು ಬೇರೆ ಬೇರೆ ತರಹದ ಟ್ಯಾಕ್ಸ್ ಹಾಕ್ತಿದ್ದಾರೆ. ಮತ್ತೆ ವಿದ್ಯುತ್ ದರ ಒಂದು ರೂ. ಏರಿಸಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೂ ಸಹ ಇಲ್ಲ ಅಂತ ಹೇಳ್ತಿದ್ದಾರೆ. ಗುತ್ತಿಗೆದಾರರ ಬಿಲ್ ಆಗ್ತಿಲ್ಲ. ಇನ್ನು ಕೆಲ ಶಾಸಕರಿಗೆ ಮಂತ್ರಿ ಮಾಡಿಲ್ಲ ಎಂಬ ಅಸಮಾಧಾನ ಕೂಡ ಇದೆ ಎಂದು ಕುಟುಕಿದರು.

Exit mobile version