Site icon PowerTV

ಕುಮಾರಣ್ಣಗೆ ತಿಮ್ಮಪ್ಪನ ಆಶೀರ್ವಾದ ಇದೆ : ಆರ್. ಅಶೋಕ್

ಬೆಂಗಳೂರು : ಮಾಜಿ ಸಚಿವ ಆರ್​. ಅಶೋಕ್ ಅವರು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ತಾನೆ ಕುಮಾರಣ್ಣ ಭೇಟಿ ಮಾಡಿದೆ. ಅವರ ಕುಟುಂಬ ಕೂಡ ಜೊತೆಯಲ್ಲಿ ಇದ್ರು. ನನ್ನ ಜೊತೆ ರಾಜಕಾರಣ, ಬೇರೆ ಬೇರೆ ವಿಚಾರ ಚರ್ಚೆ ಮಾಡಿದ್ರು. ಅವ್ರು ಕಂಫರ್ಟಬಲ್ ಆಗಿದ್ದಾರೆ ಎಂದರು.

ನಾಳೆ ಅವರ ಮನೆಗೆ ಡಿಸ್ಚಾರ್ಜ್ ಆಗಿ ತೆರಳಲಿದ್ದಾರೆ. ಕುಮಾರಣ್ಣ ಅವರ ಮೈಂಡ್ ಸ್ಟ್ರೆಂಥ್ ಚೆನ್ನಾಗಿದೆ. ದೇವರ ಆಶಿರ್ವಾದ ಇದೆ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಇದೆ. ಕುಮಾರಸ್ವಾಮಿ ಅವರ ರಾಜಕೀಯ ಜೀವನ ದೊಡ್ಡದಿದೆ. ಅವರಿಗೆ ಆರೋಗ್ಯ ಭಾಗ್ಯ ಕೊಡಲಿ ಎಂದು ಹಾರೈಸಿದರು.

ಈಗ ಮೇಕೆನೂ ಇಲ್ಲ, ದಾಟೂ ಇಲ್ಲ

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಅವರು ಏನೇ ಮಾಡಿದ್ರೂ ವೋಟಿಗಾಗಿ ರಾಜಕಾರಣ ಮಾಡ್ತಿದ್ದಾರೆ. ಮೇಕೆದಾಟು ಯೋಜನೆಗೆ ಅಂತ ಪಾದಯಾತ್ರೆ ಮಾಡಿದ್ರು. ಬೇಡ ಅಂದ್ರು ಕೋವಿಡ್-19 ಕಾಲದಲ್ಲೂ ಪಾದಯಾತ್ರೆ ಮಾಡಿದರು. ಈಗ ಮೇಕೆನೂ ಇಲ್ಲ, ದಾಟೂ ಇಲ್ಲ. ಬೆಂಗಳೂರು ಜನ ಎಚ್ಚೆತ್ತುಕೊಳ್ಳಬೇಕು, ಹೋರಾಟಕ್ಕೆ ದುಮುಕಬೇಕು ಎಂದು ಹೇಳಿದರು.

Exit mobile version