Site icon PowerTV

ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ : ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಪಕ್ಷ ಅಧೋಗತಿಗೆ ಹೋಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ ಎಂಎಲ್​ಸಿ ಜಗದೀಶ್ ಶೆಟ್ಟರ್ ಕುಟುಕಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಮುಳುಗುತ್ತಿರುವ ಹಡಗು. ಅವರ ಸಂಪರ್ಕದಲ್ಲಿದ್ರೆ ನಾಳೆಯಿಂದನೇ ಆಪರೇಶನ್ ಸ್ಟಾರ್ಟ್ ಮಾಡಲಿ ಎಂದು ಹೇಳಿದರು.

ರಾಜೀನಾಮೆ ಕೊಟ್ಟು ಯಾರು ಹೋಗ್ತಾರೆ? ಗಟ್ಟಿ ಮುಟ್ಟಾದ ಸರ್ಕಾರ ಇದೆ. ಅವರ ಭಾಷಣ ನಾನು ನೋಡಿಲ್ಲ. ಅವರ ಬಗ್ಗೆ ನಾನು ಸಾಕಷ್ಟು ಮಾತನಾಡಿದ್ದೇನೆ. ಅವರ ಬಗ್ಗೆ ಬಿಜೆಪಿ ಯೋಚನೆ ಮಾಡಬೇಕು. ದೆಹಲಿಯಲ್ಲಿ ಕೂತ ನಾಯಕರು ಯೋಚನೆ‌ ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ‌ ಕೆಲವೇ ಜನರ ಕೈಯಲ್ಲಿದೆ

ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ತಿದೆ. ಇದಕ್ಕೆ ಕಾರಣ ಬಿಜೆಪಿ‌ ಕೆಲವೇ ಜನರ ಕೈಯಲ್ಲಿದೆ. ಅದರಿಂದ ಹೊರಬಂದರೆ ಮಾತ್ರ ಭವಿಷ್ಯ. ಅದರಿಂದ ಹೊರಬರುವುದಕ್ಕೆ ಆಗತ್ತದೆಯೋ ಇಲ್ಲವೋ ನಾನೇ ಹೊರಗೆ ಬಂದು ಬಿಟ್ಟೀನಿ. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ ‌ಎಂದು ಜಗದೀಶ್ ಶೆಟ್ಟರ್ ಚಾಟಿ ಬೀಸಿದರು.

ಮುನೇನಕೊಪ್ಪ ಅವರ ಜೊತೆ ನಾನು ಮಾತನಾಡಿಲ್ಲ. ಹೈಕಮಾಂಡ್ ಕೂಡಾ ನನಗೆ ಏನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

Exit mobile version