Site icon PowerTV

ಕಾವೇರಿ ವಿವಾದ :ಸರ್ಕಾರದ ವಿರುದ್ಧ ಬಾರ್​ ಕೋಲು​​ ಚಳುವಳಿ!

ಮಂಡ್ಯ : ಪ್ರತೀ ದಿನ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ರೈತ ಮುಖಂಡರು ಬಾರುಕೋಲು ಚಳುವಳಿ ಆರಂಭಿಸಿದರು.

ಮಂಡ್ಯದ ಶ್ರೀರಂಗ ಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಆನೇಕ ರೈತ ಮುಖಂಡರು ಭಾಗಿಯಾಗಿದ್ದರು, ಶ್ರೀರಂಗ ಪಟ್ಟಣದ ಕುವೆಂಪು ವೃತ್ತದಲ್ಲಿ ಸಮಿತಿ ಮುಖಂಡರು ಜಮಾಯಿಸಿ ಬಾರು ಕೋಲು ಹಿಡಿದು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜೂರಿಚ್‌ ಡೈಮಂಡ್ ಲೀಗ್​: ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ನೀರಜ್​ ಚೋಪ್ರ

ಈ ವೇಳೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದುನ್ನ ಖಂಡಿಸಿ ಈಗಾಗಲೇ ಮಂಡ್ಯ ಜಿಲ್ಲೆಯಾದ್ಯಂತ ಹಲವೆಡೆ ಹತ್ತಾರು ಚಳುವಳಿಗಳು ನಡೆಯುತ್ತಿದೆ, ನಾವು ವಿಶಿಷ್ಟವಾಗಿ ಬಾರು ಕೋಲು ಚಳುವಳಿಯನ್ನು ನಡೆಸುತ್ತಿದ್ದೇವೇ, ನೀರು ಹರಿಸುವುದನ್ನು ನಿಲ್ಲಿಸದಿದ್ದರೇ ವಿಷಕುಡಿಯುವುದೊಂದೆ ನಮ್ಮ ಮುಂದಿರುವ ದಾರಿ. ಆದ್ದರಿಂದ ಈ ಕೂಡಲೇ ತಮಿಳು ನಾಡಿಗೆ ನೀರ ಹರಿಸುವುದನ್ನು ನಿಲ್ಲಿಸದಿದ್ದರೇ ಚಳುವಳಿಯು ಉಗ್ರ ಹೋರಾಟ ರೂಪ ಪಡೆದುಕೊಳ್ಳಲಿದೆ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಸಿದರು.

ಈ ಸಂರ್ಭದಲ್ಲಿ ರೈತ ಮುಖಂಡರು ಹಾಗು ಸ್ಥಳೀಯರು ಉಪಸ್ಥಿತರಿದ್ದರು.

Exit mobile version