Site icon PowerTV

ಕೋಳಿ ಫಾರಂ ಗೆ ನುಗ್ಗಿದ ಚಿರತೆ

ತುಮಕೂರು : ಕೋಳಿ ಫಾರಂ ಒಂದರ ಒಳಗೆ ನುಗ್ಗಿದ್ದ ಚಿರತೆ ಘಟನೆ ಕುಣಿಗಲ್ ತಾಲೂಕಿನ ಚೌಡನಕುಪ್ಪೆಯಲ್ಲಿ ನಡೆದಿದೆ.

ನಿನ್ನೆ ಆಹಾರ ಅರಸಿ ಬಂದ ಚಿರತೆ ಒಂದು ಕೋಳಿ ಫಾರಂ ಒಳಗೆ ಸೇರಿಕೊಂಡಿತ್ತು. ಈ ವೇಳೆ ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರು ಚಿರತೆ ಕಂಡು ಗಾಬರಿಗೊಂಡಿದ್ದರು.

ಇದನ್ನು ಓದಿ : ನಾನು ಬಳೆ ಹಾಕೊಂಡು ಕೂತಿಲ್ಲ.. ಅಖಾಡದಲ್ಲಿ ಎಲ್ಲದಕ್ಕೂ ರೆಡಿ : ಸಂಸದ ಜಾಧವ್ ಸವಾಲ್

ಬಳಿಕ ಚಿರತೆ ಕಂಡ ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿದ್ದ ಕೆಲಸಗಾರರು. ಬನ್ನೇರುಘಟ್ಟ ಅರವಳಿಕೆ ತಜ್ಞರಿಂದ ಅರವಳಿಕೆ ನೀಡಿ ನಂತರ ಚಿರತೆಯನ್ನು ಸೆರೆ ಹಿಡಿಯಲಾಯಿತು. ಸದ್ಯ ಚಿರತೆಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಕರೆದೊಯ್ದ ಅರಣ್ಯ ಇಲಾಖೆ ಸಿಬ್ಬಂದಿ.

Exit mobile version