Site icon PowerTV

ಲಿಸ್ಟ್ ಮಾಡ್ತಿದ್ದೇವೆ, ನಿರುದ್ಯೋಗಿಗಳಿಗೂ ದುಡ್ಡು ಕೊಡ್ತಿವಿ : ಪರಮೇಶ್ವರ್

ಬೆಂಗಳೂರು : ನಿರುದ್ಯೋಗಿಗಳಿಗೂ ಹಣ ಕೊಡ್ತೀವಿ, ಲಿಸ್ಟ್ ಮಾಡುತ್ತಿದ್ದೇವೆ. ಆದಷ್ಟು ಬೇಗ ಯುವನಿಧಿ ಯೋಜನೆಯೂ ಜಾರಿ ಆಗಲಿದೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮ್ಮನ್ನು ನೋಡಿಕೊಂಡು ಅವರೂ ಗ್ಯಾರಂಟಿ ಜಾರಿ ಮಾಡಲಿ. ಕೇವಲ ನಮ್ಮನ್ನು ಟೀಕೆ ಮಾಡೋದು ಮಾತ್ರವಲ್ಲ ಎಂದು ವಿಪಕ್ಷಗಳಿಗೆ ಕುಟುಕಿದರು.

ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ, ಮಹಿಳೆಯರಿಗೆ ಸ್ವಾಭಿಮಾನ ಶಕ್ತಿ ಕೊಟ್ಟಿದ್ದೇವೆ. ಹಣ ಹೆಚ್ಚು ಖರ್ಚಾದ್ರೂ ಮಾಡಲೇಬೇಕು ಅಂತ ತೀರ್ಮಾನ ಮಾಡಿದ್ವಿ. ನಿನ್ನೆ ಒಂದು‌ ಲಕ್ಷ ಹೆಚ್ಚು ಮಹಿಳೆಯರು ಬಂದಿದ್ರು. ಇಡೀ ದೇಶದಲ್ಲಿ ಕರ್ನಾಟಕ ಮಾಡೆಲ್ ಬಗ್ಗೆ ಮಾತಾಡ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರ ಇರುವ ಕಡೆಯೂ ಕಾಂಗ್ರೆಸ್​ ಸರ್ಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ನಾವು ಮಾಡಿದ ಮೇಲೆ ಇವರು ಗ್ಯಾಸ್ ಬೆಲೆ 200 ರೂ. ಇಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Exit mobile version