Site icon PowerTV

ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗ್ತೀನಿ : ಬಿಎಸ್​ವೈ

ಬೆಂಗಳೂರು : ಶಿವಮೊಗ್ಗ ವಿಮಾನ ನಿಲ್ದಾಣ ಆಗಲು ಕಾರಣರಾದ ಪುತ್ರ ಹಾಗೂ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನಮ್ಮ ಶಿವಮೊಗ್ಗದಲ್ಲಿ ಏರ್ಪೋಟ್ ಆಗಲು ರೈತರು ಕಾರಣ. ಸಣ್ಣ ಕಾರಣ ಇಲ್ಲದೆ ಜಮೀನು ಬಿಟ್ಟುಕೊಟ್ರು. ನನ್ನ ಜೊತೆ ಕೆಲ ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗ್ತೀನಿ ಎಂದು ಹೇಳಿದ್ದಾರೆ.

ಕೈಗಾರಿಕೆ, ಬೇರೆ ಕಾರಣಕ್ಕೂ ಅನುಕೂಲ ಆಗಲಿದೆ. ಏರ್ಪೋಟ್ ಆಗಲು ಸಾಧ್ಯವಾದ ಎಲ್ಲರಿಗೂ ಅಭಿನಂದನೆಗಳು. ಸಂಸದ ರಾಘವೇಂದ್ರಗೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದೆ ಓಡಾಡಲು ಬಹಳ ಅನುಕೂಲ ಆಗಲಿದೆ. ಮುಖ್ಯಮಂತ್ರಿ ಆಗಿದ್ದಾಗಿನ ಕನಸು ನನಸು ಆಯ್ತು ಅನ್ನೋ ಪ್ರಶ್ನೆಗೆ, ಬಹಳ ಸಂತೋಷ, ಥ್ಯಾಂಕ್ಯು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

ಬಿಜೆಪಿ ಸಭೆಗೆ ಬಿಎಸ್​ವೈ ಗೈರು?

ವಿಧಾನಸಭಾ ಚುನಾವಣೆ ಸೋಲಿ‌ನ ಬಳಿಕ ಮೊದಲ ಬಾರಿಗೆ ಬಿಜೆಪಿ ಹೈ ವೋಲ್ಟೇಜ್ ಸಭೆ ನಡೆಸಲಿದೆ. ಈ ಸಭೆಯಲ್ಲಿ ಯಡಿಯೂರಪ್ಪ ಇರೋದಿಲ್ಲ. ಇಂದಿನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ವಿಮಾನ ಹಾರಟ ಆರಂಭವಾಗಲಿದೆ. ಹೀಗಾಗಿ, ಯಡಿಯೂರಪ್ಪ ಶಿವಮೊಗ್ಗಕ್ಕೆ ತೆರಳಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂ.ಕಾರ್ಯದರ್ಶಿ ರಾಜೇಶ್, ಬಿ.ಎಲ್ ಸಂತೋಷ್, ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

Exit mobile version