Site icon PowerTV

ಮೋದಿ, ನಡ್ಡಾ, ಶಾ ವಿರುದ್ಧ ನಾನು ಮಾತಾಡಿಲ್ಲ : ರೇಣುಕಾಚಾರ್ಯ

ಬೆಂಗಳೂರು : ವಿಶ್ವ ಮೆಚ್ಚಿದ ನಾಯಕ ಪ್ರಧಾನಿ ನರೇಂದ್ರ ಮೋದಿ ಚೆನ್ನಾಗಿ ಕೆಲಸ ಮಾಡ್ತಿದ್ದಾರೆ . ಅವರೇ ಪ್ರಧಾನಿ ಆಗಬೇಕೆಂಬುದು ನಮ್ಮ ಆಸೆ. ಅದು ಸರಿಯಾಗಲಿ ಅಂತ ನಾನು ಮಾತಾಡ್ತೀನಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಬಿಜೆಪಿ ಬಿಡೋದಿಲ್ಲ.. ಪಕ್ಷದಲ್ಲೇ ಇದ್ದೇನೆ. ನಾನು ಯಾವುದನ್ನು ಮುಚ್ಚುಮರೆ ಇಲ್ಲದೆ ಹೇಳಿದ್ದೇನೆ. ಪಕ್ಷದಲ್ಲಿ ಸಂಘಟನೆ ಕೊರತೆ ಇದೆ, ಇದು ಸರಿಯಾಗಬೇಕು ಎಂದು ತಿಳಿಸಿದರು.

ನಾನು ಪಕ್ಷ, ಪ್ರಧಾನಿ ನರೇಂದ್ರ ಮೋದಿ, ಜೆ.ಪಿ ನಡ್ಡಾ, ಅಮಿತ್ ಶಾ ವಿರುದ್ಧ ಮಾತನಾಡಿಲ್ಲ. ನಾನು ಮಾತನಾಡಿರೋದು ಕೆಲ ವ್ಯಕ್ತಿಗಳ ದೌರ್ಬಲ್ಯದ ಬಗ್ಗೆ. ಅದನ್ನು ನೇರವಾಗಿ ಖಂಡಿಸಿದ್ದೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ರಾಜಕೀಯ ಪಾರ್ಟಿ. ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ ಎಂದು ಬೇಸರಿಸಿದರು.

ಕೆಲವ್ರು ಭ್ರಮೆ ಲೋಕದಲ್ಲಿದ್ದಾರೆ

ವಿಪಕ್ಷ ನಾಯಕ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ. ಇದನ್ನು ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕು. ಕೆಲವರು ದುರಹಂಕಾರ, ಭ್ರಮೆ ಲೋಕದಲ್ಲಿರುವವರಂತೆ ಆಡ್ತಾರೆ. ಅದಕ್ಕೆ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಲೋಕಸಭೆಗೆ ಇದು ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದು ರೇಣುಕಾಚಾರ್ಯ ಮರುಕ ವ್ಯಕ್ತಪಡಿಸಿದರು.

Exit mobile version