Site icon PowerTV

ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ: ಸಿಐಡಿಯಿಂದ ರೆಡ್ ಕಾರ್ನರ್ ನೋಟಿಸ್!

ಬೆಂಗಳೂರು: ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಅತ್ಯಾಚಾರ ಆರೋಪ ಪ್ರಕರಣದ ವಿಚಾರಣೆಗೆ ಗೈರಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲು ಇಂಟರ್​‌ ಪೋಲ್‌ಗೆ ಸಿಐಡಿ ಪ್ರಸ್ತಾವನೆ ಸಲ್ಲಿಸಿದೆ.

ಇಂಟರ್ ಪೋಲ್ ಅಧಿಕಾರಿಗಳು ಕೆಲವೊಂದು ಸ್ಪಷ್ಟಿಕರಣ ಕೇಳಿದ್ದಾರೆ. ಅವುಗಳಿಗೆ ದಾಖಲೆ ಸಮೇತ ವರದಿ ಸಲ್ಲಿಸಿರುವುದಾಗಿ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ. ಈ ಹಿಂದೆ ನಿತ್ಯಾನಂದ ವಿರುದ್ಧ ಮಾಜಿ ಶಿಷ್ಯೆಯರು ಅತ್ಯಾಚಾರ ಆರೋಪ ಮಾಡಿದ್ದರು.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್​ : ಖಾಸಗಿ ಸಾರಿಗೆ ಬಂದ್‌ಗೆ ಇಂದು ದಿನಾಂಕ ನಿಗಧಿ!

ಪ್ರಕರಣಗಳ ತನಿಖೆ ನಡೆಸಿದ ಸಿಐಡಿ, ಕೋರ್ಟ್‌ಗೆ ಆರೋಪ ಪಟ್ಟಿ ಕೂಡ ಸಲ್ಲಿಸಿದೆ. ಕೃತ್ಯಗಳಲ್ಲಿ ಜಾಮೀನು ಪಡೆದ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದರು. ದಕ್ಷಿಣ ಅಮೆರಿಕದಲ್ಲಿ ದ್ವೀಪ ಖರೀದಿಸಿ ‘ಕೈಲಾಸ’ ಹೆಸರಿನಲ್ಲಿ ತನ್ನದೇ ದೇಶ ಘೋಷಿಸಿಕೊಂಡು ನೆಲೆಸಿದ್ದಾರೆ.

Exit mobile version