Site icon PowerTV

ಎರಡನೇ ಪತ್ನಿ ಮನೆಯಿಂದ ಬಿದ್ದು ಪತಿ ಆತ್ಮಹತ್ಯೆ

ಬೆಂಗಳೂರು : ಎರಡನೇ ಪತ್ನಿ ಮನೆಯಿಂದ ಬಿದ್ದು ಅನುಮಾನಸ್ಪದ ರೀತಿಯಲ್ಲಿ ಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅನ್ನಪೂರ್ಣೇಶ್ವರಿ ನಗರದ ನಾಗರಭಾವಿಯಲ್ಲಿ ಘಟನೆ ಸಂಭವಿಸಿದೆ. ಮಾರಾಂಜಿನಪ್ಪ(62) ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ದುರ್ವೈವಿ.

ಇಂದು ಮುಂಜಾನೆ 3 ಗಂಟೆಗೆ ಘಟನೆ ನಡೆದಿದೆ. ಈತ ಉದ್ಯಮಿ ಎಂದು ತಿಳಿದುಬಂದಿದೆ. ಕಟ್ಟಡದಿಂದ ಬಿದ್ದ ಮಾರಾಂಜಿನಪ್ಪನನ್ನು ಕೂಡಲೇ ಎರಡನೇ ಪತ್ನಿ ಆಸ್ಪತ್ರೆಗೆ ಸೇರಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪತಿ ಕೊನೆಯುಸಿರೆಳೆದಿದ್ದಾರೆ.

ಘಟನಾ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ಬಗ್ಗೆ ಮಾರಾಂಜಿನಪ್ಪ ಕುಟುಂಬಸ್ಥರು ಎರಡನೇ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version