Site icon PowerTV

ಮೋದಿ ‘ಉಡಾನ್’ ಯೋಜನೆ ಕನಸು ಈಡೇರಲಿ : ಶಿಕ್ಷಣ ಸಚಿವ

ಶಿವಮೊಗ್ಗ : ಪ್ರಧಾನಿ ನರೇಂದ್ರ ಮೋದಿ ಅವರ ಉಡಾನ್ ಯೋಜನೆ ಕನಸು ಈಡೇರಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಹವಾಯಿ ಚಪ್ಪಲ್ ಹಾಕಿಕೊಳ್ಳುವವರು ವಿಮಾನ ಹತ್ತಬೇಕೆಂದರೆ ಈಗಿನ ದರದಿಂದ ಸಾಧ್ಯವಿಲ್ಲ ಎಂದು ತಿಳಿಸಿದರು.

ವಿಮಾನ ನಿಲ್ದಾಣ ನಿರ್ಮಾಣ ಖುಷಿ ತಂದಿದೆ. ವಿಮಾನ ನಿಲ್ದಾಣ ತುಂಬಾ ಚೆನ್ನಾಗಿ ಆಗಿದೆ. ಆದರೆ, ಇನ್ನಷ್ಟು ಪೂರಕ ಕೆಲಸಗಳು ಹಿಂದೆ ಉಳಿದಿವೆ. ಅದನ್ನು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಖಂಡಿತ ಮಾಡ್ತೇನೆ ಎಂದು ಭರವಸೆ ನೀಡಿದರು.

ಕಷ್ಟದ ಕೆಲ್ಸ ಕೊಡೋಣ ಅಂದ್ರು

ಶಿಕ್ಷಣ ಇಲಾಖೆಯ ದೊಡ್ಡ ಜವಾಬ್ದಾರಿ ಇದೆ. ರಾಜ್ಯಾದ್ಯಂತ ತಿರುಗಾಡಿ ಮಾಹಿತಿ ಕಲೆ ಹಾಕಿ ಕೆಲಸ ಆರಂಭಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರು ನನಗೆ ಬೇರೆ ಖಾತೆ ಕೊಟ್ಟಿದ್ದರು. ಆದರೆ, ಡಿಸಿಎಂ ಡಿ.ಕೆ ಶಿವಕುಮಾರ್ ಕಷ್ಟದ ಕೆಲಸ ಕೊಡೋಣ ಅಂದ್ರು. ಅದಕ್ಕೆ ಸುರ್ಜೇವಾಲಾ ಕೂಡ ದನಿಗೂಡಿಸಿದರು. ಹೀಗಾಗಿ, ಶಿಕ್ಷಣ ಇಲಾಖೆ ಜವಾಬ್ದಾರಿ ನನಗೆ ಸಿಕ್ಕಿದೆ ಎಂದು ಹೇಳಿದರು.

Exit mobile version