Site icon PowerTV

ಚೆಸ್ ತಾರೆ ಪ್ರಜ್ಞಾನಂದಗೆ ಅದ್ದೂರಿ ಸ್ವಾಗತ!

ಚೆನ್ನೈ: ಚೆಸ್​ ವಿಶ್ವಕಪ್ ರನ್ನರ್​ಅಪ್​ ಚಾಂಪಿಯನ್ ಷಿಪ್​ ಬಳಿಕ ಅಜರ್‌ಬೈಜಾನ್‌ನಿಂದ ಬುಧವಾರ ಭಾರತದ ಚೆನ್ನೈನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೆಸ್​ ವಿಶ್ವಕಪ್​ ರನ್ನರ್​ಅಪ್​ ಆರ್​. ಪ್ರಜ್ಞಾನಂದಗೆ ಭರ್ಜರಿ ಸ್ವಾಗತ ಕೋರಲಾಯಿತು.

ಇದನ್ನೂ ಓದಿ: ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ: ಸಿಐಡಿಯಿಂದ ರೆಡ್ ಕಾರ್ನರ್ ನೋಟಿಸ್!

ತಮಿಳುನಾಡು ರಾಜ್ಯ ಕ್ರೀಡಾ ಇಲಾಖೆಯ ಅಧಿಕಾರಿಗಳ ಜತೆಗೆ ಸ್ಥಳೀಯ ಜಾನಪದ ನೃತ್ಯ ಕಾರಗಟ್ಟಂ ಮತ್ತು ಒಯಿಲಾಟ್ಟಂ ಕಲಾವಿದರ ಸಹಿತ ಅಪಾರ ಸಂಖ್ಯೆಯ ಬೆಂಬಲಿಗರು ಹೂಗುಚ್ಛ ನೀಡಿ ಅದ್ದೂರಿ ಸ್ವಾಗತ ಕೋರಿದರು.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡು ಪುಳಕಿತರಾದ ಪ್ರಜ್ಞಾನಂದ, ‘ನನ್ನನ್ನು ಸ್ವಾಗತಿಸಲು ಅನೇಕ ಜನರು ಬಂದಿರುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಇದು ನಿಜವಾಗಿಯೂ ಅದ್ಭುತ ಅನುಭವ’ ಎಂದು ವರ್ಣಿಸಿದರು.

Exit mobile version