Site icon PowerTV

ರೇಣುಕಾಚಾರ್ಯ ಬಿಎಸ್​ವೈ ಮಾನಸ ಪುತ್ರ ಅಲ್ಲ.. ಮಾನಸಿಕ ಪುತ್ರ : ಹೆಚ್.ಬಿ ಮಂಜಪ್ಪ

ದಾವಣಗೆರೆ : ರೇಣುಕಾಚಾರ್ಯ ಅವರು ಯಡಿಯೂರಪ್ಪ ಅವರ ಮಾನಸ ಪುತ್ರ ಅಂತಾರೆ. ಇವ್ರು ಮಾನಸ ಪುತ್ರ ಅಲ್ಲ.. ಮಾನಸಿಕ ಪುತ್ರ ಎಂದು ದಾವಣಗೆರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪ ಕುಟುಕಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಪಿ ರೇಣುಕಾಚಾರ್ಯ ವಿವಾದಾತ್ಮಕ ವ್ಯಕ್ತಿ. ಸೋತ ಬಳಿಕ ರೇಣುಕಾಚಾರ್ಯಗೆ ಬುದ್ದಿ ಭ್ರಮಣೆಯಾಗಿದೆ. ಕಾಂಟ್ರವರ್ಸಿ ಮನುಷ್ಯ ನಮಗೆ ಬೇಡವೇ ಬೇಡ. ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ, ಅಲ್ಲಿಯೇ ಶಿಸ್ತು ಉಲ್ಲಂಘನೆ ಮಾಡಿ ನೋಟಿಸ್ ಪಡೆದಿದ್ದಾರೆ. ರೇಣುಕಾಚಾರ್ಯ ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ಗುಡುಗಿದರು.

ರೇಣುಕಾಚಾರ್ಯ ಡಬಲ್ ಗೇಮ್ ರಾಜಕಾರಣಿ. ಅಧಿಕಾರ ಕೊಟ್ಟ ಪಕ್ಷಕ್ಕೆ ಮಾರ್ಯಾದೆ ಕೊಡ್ತಾ ಇಲ್ಲ, ಇನ್ನೂ ನಮಗೆ ಕೊಡ್ತಾರಾ? ಇವರ ಹುಚ್ಚಾಟಗಳನ್ನು ನಾವು ನೋಡೊಕೆ ಆಗಲ್ಲ. ಬಿಜೆಪಿಗೆ ಬ್ಲಾಕ್ ಮಾಡೋಕೆ ಹೀಗೆ ಮಾಡುತ್ತಿದ್ದಾರೆ. ಸುಖಾಸುಮ್ಮನೆ ಪ್ರಚಾರ ತೆಗೆದುಕೊಳ್ಳಲು ಮಂತ್ರಿಗಳನ್ನು ಭೇಟಿಯಾಗಿ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಶೆಟ್ಟರ್ ಹುಚ್ಚಾಟ ಮಾಡಿರಲಿಲ್ಲ

ಜಗದೀಶ್ ಶೆಟ್ಟರ್ ಅವರು ಇವರಂತೆ ಹುಚ್ಚಾಟ ಮಾಡಿರಲಿಲ್ಲ. ಹೀಗಾಗಿ, ಪಕ್ಷಕ್ಕೆ ಕರೆದುಕೊಂಡೆವು. ಬಿಜೆಪಿಗೆ ಮುಜುಗರ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ನಿಂದ ಸಂಪೂರ್ಣ ವಿರೋಧ ಮಾಡುತ್ತಿದ್ದೇವೆ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಈಗ ಅಭಿವೃದ್ಧಿ ನೆಪ ಹೊಡ್ಡಿ ನಮ್ಮ ಮಂತ್ರಿಗಳ ಬಳಿ ಓಡಾಡ್ತಾ ಇದಾರೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಮನವರಿಕೆ ಮಾಡ್ತಿವಿ. ಭ್ರಷ್ಟಾಚಾರ ಮುಚ್ಚಿ ಹಾಕಲು ಈ ರೀತಿ ಮಾಡುತ್ತಿರಬಹುದು. ನಮ್ಮ ಪಕ್ಷಕ್ಕೆ ರೇಣುಕಾಚಾರ್ಯ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

Exit mobile version