Site icon PowerTV

ಚಿಕ್ಕಮಗಳೂರಲ್ಲಿ COW ಬಿರಿಯಾನಿ ದಂಧೆ, ಹೋಟೆಲ್ ಸೀಜ್

ಚಿಕ್ಕಮಗಳೂರು : ಪ್ರವಾಸಿಗರೇ ಎಚ್ಚರ.. ಎಚ್ಚರ..! ನಾನ್ ವೆಜ್ ತಿನ್ನುವ ಮುನ್ನ ಇರಲಿ ಎಚ್ಚರ..! ಮಟನ್ ಬಿರಿಯಾನಿ ಅಂತ ಆರ್ಡರ್ ಮಾಡಿದ್ರೆ ನಿಮಗೆ ಸರ್ವ್​ ಆಗೋದು Cow ಬಿರಿಯಾನಿ!

ಹೌದು, ಚಿಕ್ಕಮಗಳೂರಿನಲ್ಲಿ Cow ಬಿರಿಯಾನಿ ದಂಧೆ ಬೆಳಕಿಗೆ ಬಂದಿದೆ. ಕುರಿ ಬಿರಿಯಾನಿಗೆ ಗೋ ಮಾಂಸ ಮಿಕ್ಸ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದ ಕರಾಳ ದಂಧೆ ಪತ್ತೆಯಾಗಿದೆ.

ಚಿಕ್ಕಮಗಳೂರು ನಗರದ ಹಲವು ನಾನ್ ವೆಜ್​ ಹೋಟೆಲ್​ಗಳಲ್ಲಿ ಆತಂಕಕಾರಿ ಬೀಫ್ ಮಿಕ್ಸಿಂಗ್ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ. ದಾಳಿ ವೇಳೆ ದನದ ಮಾಂಸದ ಮಿಕ್ಸಿಂಗ್ ದಂಧೆ ಬಟಾ ಬಯಲಾಗಿದೆ.

ಬಿರಿಯಾನಿ ಪ್ರೀಯರು ಶಾಕ್

ಹೋಟೆಲ್ ಮಾಲೀಕರು ಕುರಿ ಬಿರಿಯಾನಿಗೆ ದನದ ಮಾಂಸ ಮಿಕ್ಸ್ ಮಾಡಿ ಗ್ರಾಹಕರಿಗೆ ಸರ್ವ್ ಮಾಡುತ್ತಿದ್ದರು. ಇದನ್ನು ಕಂಡ ಬಿರಿಯಾನಿ ಪ್ರೀಯರು ಶಾಕ್ ಆಗಿದ್ದಾರೆ. ಚಿಕ್ಕಮಗಳೂರ ನಗರದ ಎವರೆಸ್ಟ್ ಹೋಟೆಲ್, ಬೆಂಗಳೂರು ಹೋಟೆಲ್​ನಲ್ಲಿ ಈ ಘಟನೆ ನಡೆದಿದೆ.

ಇಬ್ಬರು ಆರೋಪಿಗಳ ಬಂಧನ

ಮಾಂಸದ ಮಿಕ್ಸಿಂಗ್ ದಂಧೆಯಲ್ಲಿ ತೊಡಗಿದ್ದ ಎರಡು ಹೋಟೆಲ್​ಗಳನ್ನು ಪೊಲೀಸರು ಕ್ಲೋಸ್ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಲತೀಫ್, ಶಿವರಾಜ್ ಬಂಧಿತ ಆರೋಪಿಗಳಾಗಿದ್ದಾರೆ.

Exit mobile version