Site icon PowerTV

ನನ್ನ ಪ್ರಣಾಳಿಕೆಯನ್ನೇ ಕಾಂಗ್ರೆಸ್ ಕಾಪಿ ಮಾಡಿದೆ : ಜನಾರ್ದನರೆಡ್ಡಿ

ಕೊಪ್ಪಳ : ನನ್ನ ಪಕ್ಷದ ಪ್ರಣಾಳಿಕೆ ಗಮನಿಸಿ ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಗಂಗಾವತಿಯಲ್ಲಿ ಶಾಸಕ ಜನಾರ್ದನರೆಡ್ಡಿ ಹೇಳಿದ್ದಾರೆ.

ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾರಿರುವ ಅವರು, ಕೆ.ಆರ್.ಪಿ ಪಕ್ಷದ ಪ್ರಣಾಳಿಕೆಯನ್ನು ಕಾಂಗ್ರೆಸ್​ ಓವರ್ ಟೇಕ್ ಮಾಡಿದೆ ಎಂದಿದ್ದಾರೆ.

ಕೆ.ಆರ್.ಪಿ ಪಕ್ಷದ ಪ್ರಣಾಳಿಕೆ ಸಿದ್ದರಾಮಯ್ಯನವರ ಕಿವಿಗೆ ಬಿದ್ದಿವೆ. ನಮ್ಮ ಪ್ರಣಾಳಿಕೆಯನ್ನೇ ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡು ಜಾರಿಗೆ ತಂದಿದೆ. ಗೃಹಲಕ್ಷ್ಮಿ, ಯುವನಿಧಿ ಗ್ಯಾರಂಟಿ ಯೋಜನೆ ಕೆ.ಆರ್.ಪಿ ಪಕ್ಷದ್ದು. ಶಕ್ತಿ ಯೋಜನೆಯೂ ಸಹ ನನ್ನ ಪ್ರಣಾಳಿಕೆ ಆಗಿತ್ತು ಎಂದು ಹೇಳಿದ್ದಾರೆ.

ಇದೀಗ ದೇವರ ಆಶೀರ್ವಾದದಿಂದ ನಾನು ಮಾಡುವ ಕೆಲಸ ಸಿದ್ದರಾಮಯ್ಯನವರು ಮಾಡ್ತಾ ಇದಾರೆ. ಆದರೂ, ಸಿದ್ದರಾಮಯ್ಯನವರ ಕಾರ್ಯ ಶ್ಲಾಘನೀಯ ಎಂದು ಜನಾರ್ದನರೆಡ್ಡಿ ಕೊಂಡಾಡಿದ್ದಾರೆ.

Exit mobile version