Site icon PowerTV

ಮೊಯ್ಲಿ ಪೆಟ್ರೋಲ್ ಬಂಕ್ ಮುಚ್ತೀವಿ ಅಂದಿದ್ರು : ತೇಜಸ್ವಿ ಸೂರ್ಯ

ಬೆಂಗಳೂರು : ವೀರಪ್ಪ‌ಮೊಯ್ಲಿ ಅವರು ರಾತ್ರಿ‌ 8 ಗಂಟೆ ನಂತರ ಪೆಟ್ರೋಲ್ ಬಂಕ್ ಮುಚ್ಚುತ್ತೇವೆ ಅಂದಿದ್ರು. ಅಂತಹ ಕಾಂಗ್ರೆಸ್ ಸರ್ಕಾರ ‌ಅಧಿಕಾರದಲ್ಲಿತ್ತು ಎಂದು ಸಂಸದ ತೇಜಸ್ವಿ ಸೂರ್ಯ ಗುಡುಗಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಸುಳ್ಳು ಭರವಸೆ ಕೊಟ್ಟು ಜನರಿಗೆ‌ ಮೋಸ ಮಾಡುತ್ತಿದೆ ಎಂದು ಟೀಕಿಸಿದರು.

9 ವರ್ಷದ ನಂತರ 900 ರೂ.ಗೆ ಸಿಲಿಂಡರ್ ಸಿಗುವಂತೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ ಉಚಿತ ಎಲ್‌ ಪಿ‌ಜಿ ಸಿಗುತ್ತಿದೆ. 10 ಕೋಟಿ ಮಹಿಳೆಯರಿಗೆ ಯೋಜನೆ ಲಾಭವಾಗುತ್ತಿದೆ. ರಾಜ್ಯ, ದೇಶದಲ್ಲಿ ‌ಎಲ್ಲಿಯೂ ಯೂರಿಯಾ, ‌ಡಿಎಪಿ ಸಮಸ್ಯೆ ಆಗಲಿಲ್ಲ. ಜಾಗತಿಕ‌ ಮಟ್ಟದಲ್ಲಿ ಎಷ್ಟೇ‌ ಬೆಲೆ ಏರಿಕೆ ಆದರೂ 3 ಸಾವಿರ ಸಬ್ಸಿಡಿ ‌ಕೊಡ್ತಿದೆ. 80 ಕೋಟಿ ಜನರಿಗೆ ‌ಗರೀಬ್ ಕಲ್ಯಾಣ್‌ ಯೋಜನೆ ಲಾಭವಾಗಿದೆ. ಫುಡ್ & ಫರ್ಟಿಲೈಸರ್​ಗೆ 3 ಲಕ್ಷ ಕೋಟಿಗೂ‌ ಹೆಚ್ಚು ಸಬ್ಸಿಡಿ ನೀಡಲಾಗ್ತಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ 3 ಬೆಳೆ

ಕಾವೇರಿ ನೀರು ವಿಚಾರವಾಗಿ ಕಾಂಗ್ರೆಸ್​ ಸರ್ಕಾರದ ‌ಧೋರಣೆಯಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಎರಡು ಬಾರಿ ಕಾವೇರಿ ಅಥಾರಿಟಿ‌ ಎದುರು‌ ನಮಗೆ ಸೋಲಾಗಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಆಗಲಿದೆ. ನಮ್ಮ ಮಂಡ್ಯ ಭಾಗದಲ್ಲಿ ಒಂದು ಬೆಳೆ ‌ಬೆಳೆಯಲು ಕಷ್ಟವಾಗಿದೆ. ತಮಿಳುನಾಡಿನಲ್ಲಿ 3 ಬೆಳೆ ಬೆಳೆಯಲಾಗುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿಕಾರಿದರು.

Exit mobile version