Site icon PowerTV

ನಟ ಶಿವರಾಜ್ ಕೆ.ಆರ್ ಪೇಟೆ ತಂದೆ ಇನ್ನಿಲ್ಲ

ಕೆ ಆರ್ ಪೇಟೆ : ನಟ ಶಿವರಾಜ್ ಕೆ. ಆರ್ ಪೇಟೆ ಅವರ ತಂದೆ ಇಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ನಿವಾಸಿ (ಹಾಲಿವಾಸ ಜಯನಗರ ಕೆ.ಆರ್ ಪೇಟೆ) ಡ್ರಾಮಾ ಮಾಸ್ಟರ್ ಆಗಿದ್ದ, ರಾಮೇಗೌಡ (80) ವಯೋಸಹಜ ಖಾಯಿಲೆಯಿಂದ ಇಹಲೋಕ ತ್ಯಜಿಸಿದ್ದಾರೆ.

ರಾಮೇಗೌಡ ಅವರ ಪತ್ನಿ ಸಾವಿತ್ರಮ್ಮ, ಈ ದಂಪತಿಗಳಿಗೆ ಚಿತ್ರನಟ ಕೆ.ಆರ್. ಪೇಟೆ ಶಿವರಾಜ್ (ಕಾಮಿಡಿ ಕಿಲಾಡಿಗಳು) ಸೇರಿದಂತೆ ನಾಲ್ಕು ಗಂಡು ಮಕ್ಕಳು ಇದ್ದರು. ಇಂದು ಮಕ್ಕಳನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಇದನ್ನು ಓದಿ : ಪ್ರೀತಿಯಿಂದ ಹರಸಿದ ಎಲ್ಲರಿಗೂ ಥ್ಯಾಂಕ್ಸ್ : ನಟ ದರ್ಶನ್

ಮೃತರ ಅಂತ್ಯಕ್ರಿಯೆಯನ್ನು 01-09-2023 ರ ಶುಕ್ರವಾರ ಮಧ್ಯಾಹ್ನ 01 ಘಂಟೆಗೆ ಮೃತರ ಸ್ವಗ್ರಾಮದ ರಾಜಘಟ್ಟದಲ್ಲಿ ನೇರವೇರಲಿದೆ ಎಂದು ಕುಟುಂಬದ ಮೂಲಗಳಿಂದ ಮಾಹಿತಿ ತಿಳಿದಿದೆ.

Exit mobile version