Site icon PowerTV

PSI Scam : ಇಂದು ಹೈಕೋರ್ಟ್​ನಲ್ಲಿ ವಿಚಾರಣೆ

ಬೆಂಗಳೂರು : ಪಿಎಸ್‌ಐ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

545 ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವರ ಬಂಧನವಾಗಿತ್ತು. ಒಎಂಆರ್‌ ಶೀಟ್‌ ತಿದ್ದಿದ್ದ ಹಾಗೂ ಬ್ಲೂಟೂತ್ ಬಳಕೆ ಮಾಡಿ ಪರೀಕ್ಷೆ ಬರೆದಿರೋದು ಕೂಡ ದೃಢವಾಗಿತ್ತು. ಹಾಗಾಗಿ ಮರುಪರೀಕ್ಷೆ ನಡೆಸುವಂತೆ ಅಭ್ಯರ್ಥಿಗಳು ಒತ್ತಾಯ ಮಾಡಿದ್ದರು.

ಅಷ್ಟೇ ಅಲ್ಲ ಈ ಕುರಿತಂತೆ ಅಭ್ಯರ್ಥಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಪ್ರಕರಣದಲ್ಲಿ ಸಿಲುಕಿರುವವರನ್ನು ಹೊರತುಪಡಿಸಿ ಉಳಿದವರ ಆಯ್ಕೆ ಮಾಡಲಿದ್ಯಾ? ಇಲ್ಲ ಮರು ಪರೀಕ್ಷೆ ಮಾಡುವುದಕ್ಕೆ ಸೂಚನೆ ನೀಡಲಾಗಿದ್ಯಾ ಅಂತ ಅಭ್ಯರ್ಥಿಗಳು ಕೋರ್ಟ್‌ನತ್ತ ಮುಖಮಾಡಿದ್ದಾರೆ. ಇಂದು ಈ ಕುರಿತಂತೆ ಹೈಕೋರ್ಟ್‌ ವಿಚಾರಣೆ ಮಾಡಲಿದೆ.

Exit mobile version