Site icon PowerTV

ಕಂಪೌಂಡ್ ಗೋಡೆ ಕುಸಿದು ಕಾರ್ಮಿಕ ಸಾವು

ಮಂಗಳೂರು : ಏಕಾಏಕಿ ಕಂಪೌಂಡ್ ಗೋಡೆ ಕುಸಿದು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹೊರವಲಯದ ಸುರತ್ಕಲ್ ಬಳಿಯ ಕೃಷ್ಣಾಪುರದಲ್ಲಿ ನಡೆದಿದೆ.

ಬಜ್ಪೆ ಕರಂಬಾರು ನಿವಾಸಿ ಹನೀಫ್ (51) ಮೃತ ದುರ್ದೈವಿ. ಹಾಗೂ ಮಣಿ ಎಂಬ ಇಬ್ಬರೂ ಕಾರ್ಮಿಕರು ಶರೀಫ್ ಎಂಬುವರು ನಡೆಸುತ್ತಿದ್ದ, ಗುತ್ತಿಗೆ ಕಾಮಗಾರಿಯಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ಚರಂಡಿಗೆ ತಾಗಿಕೊಂಡಿದ್ದ ಮನೆ ಆವರಣದ ಕಾಂಪೌಂಡ್ ಗೋಡೆಯೊಂದು ಏಕಾಏಕಿ ಇಬ್ಬರು ಕಾರ್ಮಿಕರ ಮೇಲೆ ಬಿದ್ದಿದೆ.

ಇದನ್ನು ಓದಿ : ಸೀರೆ ಕದೀಯುತ್ತಿದ್ದ ಖತರ್ನಾಕ್ ಮಹಿಳೆಯರು; ಇಬ್ಬರ ಬಂಧನ

ಈ ಹಿನ್ನೆಲೆ ಕಾರ್ಮಿಕ ಹನೀಫ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಕಾರ್ಮಿಕ ಮಣಿ ಗಂಭೀರ ಗಾಯಗೊಂಡಿದ್ದು, ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Exit mobile version