Site icon PowerTV

ಸೀರೆ ಕದೀಯುತ್ತಿದ್ದ ಖತರ್ನಾಕ್ ಮಹಿಳೆಯರು; ಇಬ್ಬರ ಬಂಧನ

ಬೆಂಗಳೂರು : ಸೀರೆ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ ಚನ್ನಮ್ಮನ ಅಚ್ಚುಕಟ್ಟೆ ಪೋಲಿಸರು.

ಇದೇ ತಿಂಗಳ 3 ನೇ ತಾರೀಕು ಬನಶಂಕರಿ ಬಳಿಯ ಕಾಮಾಕ್ಯ ಸಿಗ್ನಲ್ ಬಳಿಯಿರುವ ರಾಜರಾಜೇಶ್ವರಿ ಸಿಲ್ಕ್ ಮತ್ತು ಸ್ಯಾರೀಸ್ ಅಂಗಡಿಯಲ್ಲಿ ಒಟ್ಟಿಗೆ 10 ಜನರ ಗ್ಯಾಂಗ್ ಬಂದು ಸೀರೆ ಕಳ್ಳತನ ಮಾಡಿದ್ದರು. ಒಬ್ಬರು ಬಿಲ್ ಮಾಡಿಸುವ ನೆಪದಲ್ಲಿ ಅಂಗಡಿ ಮಾಲೀಕರ ಗಮನ ಬೇರೆಡೆ‌ ಸೆಳೆಯುತ್ತಿದ್ದರು.

ಬಳಿಕ ಮತ್ತೊರ್ವ ಕಳ್ಳಿ ಸೀರೆಗಳನ್ನು ತಾವು ತಂದಿರುವ ಬ್ಯಾಗ್​ನಲ್ಲಿ ಇಟ್ಟುಕೊಂಡು 10 ಸಾವಿರ ಬೆಲೆ ಬಾಳುವ 24 ಸೀರೆ ಕಳ್ಳತನ ಮಾಡಿ ಪರಾರಿಯಾಗಿದ್ದ ಲೇಡಿ‌ ಕಿಲಾಡಿಗಳು.

ಇದನ್ನು ಓದಿ : ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚನೆ

ಹೀಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳು ಮಂಗಮಾಯ ಮಾಡುತ್ತಿದ್ದ, ರಜಿನಿ ಮತ್ತು ಆಕೆಯ ಗ್ಯಾಂಗ್​ನ ಇನ್ನೋರ್ವ ಮಹಿಳೆಯನ್ನು ಬಂಧಿಸಲಾಗಿದೆ. ಇಬ್ಬರನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಿಗೆ ಬಲೆ ಬೀಸಿರುವ ಪೋಲಿಸರು. ಸದ್ಯ ಚನ್ನಮ್ಮನ ಅಚ್ಚುಕಟ್ಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version