Site icon PowerTV

ಇವರದ್ದು ಬಿಚ್ಚೋ ಕಾಲ ಬರುತ್ತೆ ಬಿಚ್ತೀನಿ : ಡಿಕೆಶಿ ವಾರ್ನಿಂಗ್

ಬೆಂಗಳೂರು : 100 ದಿನ ಪೂರೈಸಿರುವ ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಮಾಡಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಅವರ ಆರೋಪ ಯಾವುದು ಸಾಬೀತು ಮಾಡಲಿ. ಇವರದ್ದು ಬಿಚ್ಚೋ ಕಾಲ ಬರುತ್ತೆ ಬಿಚ್ತೀನಿ ಎಂದು ಖಡಕ್​ ಎಚ್ಚರಿಕೆ ನೀಡಿದ್ದಾರೆ.

ಇವರಿಗೆ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಲಾಗಿಲ್ಲ. ಕಂಟ್ರಾಕ್ಟರ್ಸ್ ಬಗ್ಗೆ ಹೇಳಿ ನನ್ನ ವಿರುದ್ಧ ಆರೋಪ ಮಾಡಿದ್ರು. ನಾನು ಹೇಳಿದೆ ಸವಾಲು ಹಾಕಿದ್ದೇನೆ.. ರಾಜಕೀಯ ನಿವೃತ್ತಿ ಪಡೆಯೋದಾಗಿ.. ನನ್ನ ಮೇಲಿನ ಆರೋಪ ಸಾಬೀತು ಮಾಡಿ. ಇದಕ್ಕಿಂತ ಇನ್ನೇನು ಬೇಕು ಎಂದು ಫುಲ್ ಗರಂ ಆಗಿದ್ದಾರೆ.

ಅವರದ್ದು ಭರವಸೆ, ನಮ್ಮದು ಗ್ಯಾರಂಟಿ

100 ದಿನದಲ್ಲಿ ನಾಲ್ಕು ಗ್ಯಾರಂಟಿ ಇಂಪ್ಲಿಮೆಂಟ್ ಮಾಡಿದ್ದೇವೆ. ಮೊದಲ ಕ್ಯಾಬಿನೆಟ್​ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಇದುವರೆಗೂ ಯಾರಾದ್ರೂ ಮಾಡಿದ್ದಾರಾ? ಅವರದ್ದು ಭರವಸೆ, ನಮ್ಮದು ಗ್ಯಾರಂಟಿ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Exit mobile version