Site icon PowerTV

ನೀರಿನಲ್ಲಿ ಮುಳುಗಿ ಇಬ್ಬರೂ ಬಾಲಕಿಯರ ಸಾವು

ಬೀದರ್ : ಬಟ್ಟೆ ತೊಳೆಯಲು ಹೋಗಿ ನೀರು ಪಾಲಾದ ಇಬ್ಬರು ಬಾಲಕಿಯರು ಘಟನೆ ಬಸವಕಲ್ಯಾಣದ ಪುಲ್ದರ್ ವಾಡಿಯಲ್ಲಿ ನಡೆದ ದುರ್ಘಟನೆ.

ಸಕುಬಾಯಿ (16) ಮತ್ತು ಚಾಂದನಿ (16) ಮೃತ ದುರ್ದೈವಿಗಳು. ಎಂಬ ಇಬ್ಬರು ಬಾಲಕಿಯರು ಚಿಟ್ಟಾ (ಕೆ) ಪ್ರೌಢಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಇಂದು ಗ್ರಾಮದ ಪಕ್ಕದಲ್ಲಿರುವ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದರು.

ಇದನ್ನು ಓದಿ : ನಾಳೆ ಮೊದಲ ವಿಮಾನ ಹಾರಾಟ ಆರಂಭ ; ನಿಲ್ದಾಣದಲ್ಲಿ ಸಕಲ ಸಿದ್ಧತೆ

ಕೆರೆ ಹೂಳು ಎತ್ತಿದ್ದ ಪರಿಣಾಮ ಆಳ ಹೆಚ್ಚಾಗಿ ಹರಿಯುತ್ತಿತ್ತು.

ಬಳಿಕ ಬಟ್ಟೆ ತೊಳೆದು ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರೂ ಬಾಲಕಿಯರು ಮೃತಪಟ್ಟಿದ್ದಾರೆ. ಇಬ್ಬರೂ ಬಾಲಕಿಯರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನಾ ಸಂಬಂಧ ಮಂಠಾಳ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version