Site icon PowerTV

ಕಾಂಗ್ರೆಸ್ಸಿಗರ ತಟ್ಟೆ ಊಟಕ್ಕೆ ನಾವು ಹೋಗಲ್ಲ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು : ಕಾಂಗ್ರೆಸ್ಸಿಗರ ಹಸಿವಿನ ಇತಿಹಾಸ ನಾಡಿನ ಜನತೆಗೆ ಗೊತ್ತಿದೆ. ಅಂಥವರ ತಟ್ಟೆ ಊಟಕ್ಕೆ ಬಿಜೆಪಿ ಶಾಸಕರು ಹೋಗುವುದಿಲ್ಲ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿರುಗೇಟು ನೀಡಿದ್ದಾರೆ.

‘ಕಾಂಗ್ರೆಸ್‌ ತಟ್ಟೆಯಲ್ಲಿ ಉಣ್ಣುವವರಿಗೆ ಸ್ವಾಗತ’ ಎಂದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗೆ ಬೆಂಗಳೂರಿನಲ್ಲಿ ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದವರು ಹಸಿವಾದಾಗ ಯಾರ ಮನೆ ಬಾಗಿಲು ತಟ್ಟಿದ್ದಾರೆ ಎಂಬುದು ರಾಜ್ಯದ ಜನರಿಗೆ ಗೊತ್ತು. ಈಗ ಸಚಿವ ಸ್ಥಾನದಲ್ಲಿರುವ ಮಧು ಬಂಗಾರಪ್ಪ ಅವರ ಪೂರ್ವ ಇತಿಹಾಸವೂ ನಮ್ಮೆಲ್ಲರ ಎದುರಿಗಿದೆ. ಅವರ ಹೇಳಿಕೆ ಗಮನಿಸಿದರೆ ಜೆಡಿಎಸ್ ನಿಂದ ಹೊರ ನಡೆದು ಕಾಂಗ್ರೆಸ್‌ ತಟ್ಟೆಯ ಊಟ ಮಾಡಿದ ಸ್ವಂತ ಅನುಭವದ ಮಾತು ಹೇಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಯಾರೂ ಬಿಜೆಪಿ ತೊರೆಯಲ್ಲ

ಬಿಜೆಪಿಯ ಯಾವುದೇ ಶಾಸಕರು ಯಾವುದೇ ಕಾರಣಕ್ಕೂ ಪಕ್ಷ ತೊರೆಯುವುದಿಲ್ಲ. ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿ ಇರುತ್ತಾರೆ. ಈ ಕುರಿತು ಸುದೀರ್ಘವಾಗಿ ನಮ್ಮ ನಡುವೆ ಮಾತುಕತೆ ನಡೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Exit mobile version