Site icon PowerTV

ಸಚಿವರು ಕಾಲ್ ಪಿಕ್ ಮಾಡ್ತಿಲ್ಲ : ಕಾಂಗ್ರೆಸ್ ಶಾಸಕ ಶಿವಗಂಗಾ ಅಳಲು

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಭೆ ಮಾಡಿದರೂ ಕೆಲ ಸಚಿವರು ಸುಧಾರಿಸಿಲ್ಲ ಎಂದು ಕಾಂಗ್ರೆಸ್​ ಶಾಸಕ ಬಸವರಾಜ್ ವಿ. ಶಿವಗಂಗಾ ಬೇಸರ ಹೊರಹಾಕಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವರು ಶಾಸಕರ ಕಾಲ್ ಕೂಡ ಪಿಕ್ ಮಾಡ್ತಿಲ್ಲ. ಅವರ ಪಿಎ(PA)ಗಳು ಕೂಡ ಅದೇ ದಾರಿ ಹಿಡಿದಿದ್ದಾರೆ ಎಂದು ಅಸಮಾಧಾನಗೊಂಡಿದ್ದಾರೆ.

ಒಬ್ಬ ಸಚಿವರಿಗೆ 135 ಕ್ಷೇತ್ರದ ಶಾಸಕರ ಪೋನ್ ನಂಬರ್ ಸೇವ್ ಮಾಡಿಕೊಳ್ಳುವಷ್ಟು ಅವರ ಮೊಬೈಲ್​ನಲ್ಲಿ ಮೆಮೊರಿ ಇರೋದಿಲ್ವಾ? ಈ ರೀತಿಯಾಗಬಾರದು ಅಂತ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಸ್ವಲ್ಪ ದಿನ ನೋಡ್ತಿನಿ

ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಅಣ್ಣ. ಅವರ ಮೇಲೆ ಯಾವುದೇ ಬೇಸರ, ಮುನಿಸು ಇಲ್ಲ. ನಮ್ಮ ಉಸ್ತುವಾರಿ ಸಚಿವರು ಕಾಲ್ ಪಿಕ್ ಮಾಡ್ತಾರೆ. ನಮ್ಮ ಸಚಿವರ ವಿರುದ್ಧ ದೂರು ಇಲ್ಲ, ಬೇರೆ ಸಚಿವರು ಹಾಗೇ ಮಾಡ್ತಾರೆ. ಇನ್ನೂ ಸ್ವಲ್ಪ ದಿನ ನೋಡ್ತಿನಿ, ಆಮೇಲೆ ನಿಮ್ಮ ‌ಮುಂದೆ ಬರುತ್ತೇನೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Exit mobile version