Site icon PowerTV

ಹಣ ಬಲ, ತೋಲ್ಬಳದಿಂದ 36% ವೋಟ್ ಬಂದಿದೆ : ರಾಮಲಿಂಗಾರೆಡ್ಡಿ

ಬಾಗಲಕೋಟೆ : ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಶ್ವರಪ್ಪ ಅವರ ಮಾತಿಗೆ ಯಾಕೆ ನೀವು ಸೀರಿಯಸ್ ತಗೋತಿರಿ ಎಂದು ಕುಟುಕಿದ್ದಾರೆ.

ಲೋಕಸಭಾ ಚುನಾವಣೆ ಆದ್ರೂ ಕಾಂಗ್ರೆಸ್ ಶಾಸಕರು ಎಲ್ಲೂ ಹೋಗಲ್ಲ. ಬಿಜೆಪಿಯವರಿಗೆ 36 ಪರ್ಸೆಂಟ್ ವೋಟ್ ಬಂದಿದೆ‌. ನಮಗೆ (ಕಾಂಗ್ರೆಸ್​ಗೆ) ಬಿಜೆಪಿಗಿಂತ 7 ಪರ್ಸೆಂಟ್ ಹೆಚ್ಚಿಗೆ ವೋಟ್ ಬಂದಿದೆ. ಬಿಜೆಪಿಯವರಲ್ಲಿ ನಾಯಕತ್ವದ ಕೊರತೆ ಇದೆ. ಅಲ್ಲಿ ಮಾಸ್ ಲೀಡರ್ ಯಾರೂ ಇಲ್ಲ ಎಂದು ಛೇಡಿಸಿದ್ದಾರೆ.

ಮೊನ್ನೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹಣ ಬಲ, ತೋಳ ಬಲ ಹಾಗೂ ಅಧಿಕಾರದ ಬಲದಿಂದ 36 ಸಾವಿರ ವೋಟ್ ಬಂದಿದೆ. ಇನ್ಮುಂದಿನ ಚುನಾವಣೆಯಲ್ಲಿ ಬಿಜೆಪಿ ಡೌನ್ ಆಗ್ತಾ ಬರುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version