Site icon PowerTV

ತಮ್ಮನಿಂದಲೇ ಅಣ್ಣ, ಅತ್ತಿಗೆಯ ಬರ್ಬರ ಹತ್ಯೆ

ಮೈಸೂರು : ಆಸ್ತಿ ವಿಚಾರಕ್ಕಾಗಿ ತಮ್ಮನಿಂದಲೇ ಅಣ್ಣ, ಅತ್ತಿಗೆಯ ಬರ್ಬರ ಕೊಲೆ ಮಾಡಿರುವ ಘಟನೆ ಟಿ. ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಿವಲಿಂಗೇಗೌಡ (55), ಪತ್ನಿ ಭಾರತಿ (47) ಮೃತ ದುರ್ದೈವಿಗಳು. ಹನುಮಂತೇಗೌಡ ಮತ್ತು ಶಿವಲಿಂಗೇಗೌಡ ಇಬ್ಬರು ಸಹೋದರರು. ಆಸ್ತಿ ವಿಚಾರವಾಗಿ ಆಗಾಗ ಅಣ್ಣ ತಮ್ಮಂದಿರ ನಡುವೆ ಗಲಾಟೆ ನಡೆಯುತ್ತಲೆ ಇತ್ತು.

ಇದನ್ನು ಓದಿ : ಸಂಕಷ್ಟಕ್ಕೆ ಸಿಲುಕಿದ ರೈತ ಮಹಿಳೆಗೆ ಧನ ಸಹಾಯ ; ಸಚಿವ ಚೆಲುವರಾಯಸ್ವಾಮಿ

ಇಂದು ಜಮೀನಿನಲ್ಲಿ ಶಿವಲಿಂಗೇಗೌಡ ಮತ್ತು ಪತ್ನಿ ಭಾರತಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಹನುಮಂತೇಗೌಡ (50) ಕೊಲೆ ಮಾಡಿರುವ ಆರೋಪಿ. ಇಬ್ಬರ ಮೇಲೂ ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಸ್ಥಳಕ್ಕೆ ಬನ್ನೂರು ಠಾಣೆ ಪೋಲಿಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಬನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version