Site icon PowerTV

ಮೋದಿ ಮೆಚ್ಚಿಸಲು ಬೀದಿ ನಾಟಕ ಶುರು ಮಾಡಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್​ ಸರ್ಕಾರದ ವಿರುದ್ಧ ಚಾರ್ಜ್‌ಶೀಟ್ ಬಿಡುಗಡೆ ಮಾಡುವ ಬೀದಿ ನಾಟಕ ಶುರು ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುಡುಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ನಾಟಕ ರಂಗ ತಾಲೀಮಿಲ್ಲದ ಅರೆಬೆಂದ ಕಲಾವಿದರ ನೀರಸ ಪ್ರದರ್ಶನವಾಗಲಿದೆ ಎಂದು ಕುಟುಕಿದ್ದಾರೆ.

ಮೊನ್ನೆ ಮೋದಿಯವರು ರಾಜ್ಯ ಬಿಜೆಪಿ ನಾಯಕರನ್ನು ಕಣ್ಣೆತ್ತಿಯೂ ನೋಡದೇ ಹೋಗಿದ್ದರು. ಇದು ರಾಜ್ಯ ಬಿಜೆಪಿ ನಾಯಕರಲ್ಲಿ ಅಭದ್ರತೆಯ ಭಯ ಮೂಡಿಸಿದೆ. ನಮ್ಮ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಚಾರ್ಜ್‌ಶೀಟ್ ಬಿಡುಗಡೆ ಮಾಡುತ್ತಾರಂತೆ. ಇದು ಕಳ್ಳರೇ ಪೊಲೀಸರ ವಿರುದ್ಧ ತನಿಖೆ ಮಾಡಿದಂತೆ. ಇದೆಂತಾ ಹಾಸ್ಯಾಸ್ಪದ? ಎಂದು ಚಾಟಿ ಬೀಸಿದ್ದಾರೆ.

ಹಿಂದಿನ ಸರ್ಕಾರದ 40% ಕಮೀಷನ್ ಮತ್ತು ಕೋವಿಡ್ ಹಗರಣದ ತನಿಖೆಯನ್ನು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಈ ತನಿಖೆಯ ನಂತರ ಬೀಳಲಿರುವುದು ನಿಜವಾದ ಚಾರ್ಜ್‌ಶೀಟ್‌ ಎಂದು ತಿರುಗೇಟು ನೀಡಿದ್ದಾರೆ.

Exit mobile version