Site icon PowerTV

ಸಿದ್ರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ? : ಯತ್ನಾಳ್

ವಿಜಯಪುರ : ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ? ಮುಖ್ಯಮಂತ್ರಿ ಅಂದ್ರೆ ಶಾಸಕರು ಅವರು ಬಳಿ ಹೋಗೋದು ಸಹಜ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಬಗ್ಗೆ ಸಾಪ್ಟ್ ಕಾರ್ನಾರ್ ತೋರಿದ್ದಾರೆ.

ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನ ನೋಡಲು ಬಂದಿದ್ದರು. ಯಾಕೋ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಬಹಳ‌ ಸೈಲೆಂಟ್ ಆಗಿದ್ದಾರೆ ಎಂದು ತಿಳಿಸಿದ್ದಾರೆ.

ಯಾಕೆ ಸೈಲೆಂಟ್ ಆಗಿದ್ದಿರಾ? ಅಂತ ನಾನು ಸಿದ್ದರಾಮಯ್ಯ ಅವರಿಗೆ ಕೇಳಿದ್ದೇ. ಏನ್ ಮಾಡೋದು ಯತ್ನಾಳ್ ಇದು ಕೊನೆದಿದೆ. ಯಾರು ಏನೇ ಅಂದ್ರೂ ತಲೆ ಕೊಡಿಸಿಕೊಳ್ಳಲ್ಲ. ಜನರಿಗೆ ಉತ್ತಮ ಆಡಳಿತ ನೀಡ್ತಿನಿ ಅಂದಿದ್ದರು ಎಂದು ಯತ್ನಾಳ್ ಹೇಳಿದ್ದಾರೆ.

ಶಾಸಕರು ಸಿಎಂ ಬಳಿ ತಮ್ಮ ಕ್ಷೇತ್ರದ ಕೆಲಸಕ್ಕೆ ಹೋಗೋದು ಸಾಮಾನ್ಯ. ಹಾಗೆಂದ ಮಾತ್ರಕ್ಕೆ ‌ಸಿಎಂ ಬಳಿ ಹೋದರೆ ಕಾಂಗ್ರೆಸ್ ಸೇರುತ್ತಾರೆ ಎಂದರೆ ಹೇಗೆ? ಎಂದ ಯತ್ನಾಳ್ ಪ್ರಶ್ನಿಸಿದ್ದಾರೆ.

Exit mobile version