Site icon PowerTV

ರಕ್ಷಾಬಂಧನ ಶ್ರಾವಣ ಮಾಸ : ಸನಾತನ ಪರಂಪರೆಯ ರಕ್ಷಾಬಂಧನದ ಮಹತ್ವವೇನು ಗೊತ್ತಾ?

ರಕ್ಷಾಬಂಧನಕ್ಕೆ ಸನಾತನ ಪರಂಪರೆಯಲ್ಲಿ ಅದರದ್ದೇ ಆದ ಮಹತ್ವವಿದೆ, ಹಿಂದೆ ಶ್ರೀ ಮಹಾಲಕ್ಷ್ಮಿ ದೇವಿಯು ಬಲಿ ಚಕ್ರವರ್ತಿಗೆ ರಕ್ಷಾಬಂಧನವನ್ನು ಕಟ್ಟಿ ಸಹೋದರ ಮತ್ತು ಸಹೋದರಿಯರ ಬಾಂಧವ್ಯ ಅತ್ಯಂತ ಪವಿತ್ರವಾದ್ದು ಎಂದು ತೋರಿಸಿದ್ದಾರೆ.

ಆದರೇ, ಆಧುನಿಕತೆಯಲ್ಲಿ ನಾವುಗಳು ಸಂಪ್ರದಾಯವನ್ನೇ ಮರೆತು ಹೋಗುತ್ತಿದ್ದೇವೆ, ಈ ಸಂಬಂಧಗಳು ನಾಶವಾಗುತ್ತಿವೆ.

ಚಿನ್ನ, ಬೆಳ್ಳಿ ಮತ್ತು ಇನ್ನೂ ಅನೇಕ ರಾಖಿಗಳಿಂದ ನಮ್ಮ ಸಂಸ್ಕೃತಿಗಳು ಮರೆಯಾಗುತ್ತಿದೆ.

ಉತ್ತಮವಾದ ರಕ್ಷಾಬಂಧನವೆಂದರೇ ಹಸಿ ದಾರದಿಂದ ನವಗ್ರಂಥಿಗಳನ್ನು ಮಾಡಿ ಅದನ್ನು ಮೃತ್ತಿಕೆಯಿಂದ ಮತ್ತು ಅನೇಕ ಮೂಲ ಮಂತ್ರಗಳಿಂದ ಗಿಡಮೂಲಿಕೆಗಳನ್ನು ಹಾಕಿ ತಯಾರು ಮಾಡಲ್ಪಟ್ಟ ಅತ್ಯಂತ ಶಕ್ತಿಯುತವಾದದ್ದೇ ರಕ್ಷಾಬಂಧನ.

ಏಕೆಂದರೆ ರಕ್ಷಾಬಂಧನದಲ್ಲಿ ಅವರಲ್ಲಿ ಸಹೋದರಿಯರಿಂದ ಆಶೀರ್ವಾದ ಮಹಾಲಕ್ಷ್ಮಿಯ ಅಂಶವಿರುತ್ತದೆ.

ಶ್ರಾವಣ ಉಪಾಕರ್ಮ : ಋಗ್ವೇದಿಗಳು 29-08-2023 ರಂದು ಮತ್ತು ಯಜುರ್ವೇದಿಗಳು 30-08- 2023 ರಂದು ಉಪಾಕರ್ಮ ಮಾಡಬಹುದು. 30-08-2023 ರಂದು ವಿಶೇಷವಾಗಿ ಹಯಗ್ರೀವ ಮಹಾಸ್ವಾಮಿಯನ್ನು ಆರಾಧಿಸಿ. ಈ ದಿನ ವಿಶೇಷವಾಗಿ ಹಯಗ್ರೀವ ದೇವರನ್ನು ಆರಾಧನೆ ಮಾಡುವುದರಿಂದ ಉತ್ತಮಫಲ ದೊರೆಯಲಿದೆ.

Exit mobile version