Site icon PowerTV

ಬಿಜೆಪಿ ಮುಳುಗುತ್ತಿರುವ ಹಡಗಲ್ಲ.. ಮುಳುಗಿ ಹೋಗಿರುವ ಹಡಗು : ಎಂ.ಬಿ ಪಾಟೀಲ್

ಬೆಂಗಳೂರು : ಬಿಜೆಪಿ ಮುಳುಗುತ್ತಿರುವ ಹಡಗಲ್ಲ, ಮುಳುಗಿ ಹೋಗಿರುವ ಹಡಗು ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರೂ ಕೂಡ ಈಗ ಬಿಜೆಪಿಯಲ್ಲಿ ಇರಲು ಇಷ್ಟಪಡುವುದಿಲ್ಲ ಎಂದು ಛೇಡಿಸಿದ್ದಾರೆ.

ಬಿಜೆಪಿಯ ನಾಯಕರ ಮೇಲೆ ವರಿಷ್ಟರ ವಕ್ರ ದೃಷ್ಟಿ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೊನ್ನೆ ಇವರ ಮುಖ ಕೂಡ ನೋಡಲಿಲ್ಲ. ಮರ್ಯಾದೆ ಉಳಿಸಿಕೊಳ್ಳುವುದಕ್ಕೆ ಬ್ಯಾರಿಕೇಡ್ ಹಿಂದೆ ಇವರೇ ಹೋಗಿ ನಿಂತಿದ್ರು ಎಂದು ಲೇವಡಿ ಮಾಡಿದ್ದಾರೆ.

ತಪ್ಪು ಮಾಡಿದವ್ರು ಹೆದರಬೇಕು

ತನಿಖಾ ಆಯೋಗಗಳ ಮೂಲಕ ಬಿಜೆಪಿ ನಾಯಕರ ಟಾರ್ಗೆಟ್ ಎಂಬ ಮಾಜಿ ಸಚಿವ ಡಾ.ಕೆ ಸುಧಾಕರ್ ಆರೋಪ ವಿಚಾರವಾಗಿ ಮಾತನಾಡಿದ ಎಂಬಿಪಿ, ನೀವು ತಪ್ಪು ಮಾಡಿಲ್ಲ ಅಂದ್ರೆ ಯಾಕೆ ಹೆದರುತ್ತೀರಾ? ತಪ್ಪು ಮಾಡಿದವರು ಹೆದರಬೇಕು. ತಪ್ಪು ಮಾಡಿದವರನ್ನು ಟಾರ್ಗೆಟ್ ಮಾಡ್ತಾರೆ ಅಂದ್ರೆ ಒಪ್ಪಿಕೊಳ್ಳಬೇಕು. ತಪ್ಪು ಮಾಡಿಲ್ಲ ಅಂದರೆ ಟಾರ್ಗೆಟ್ ಮಾಡಿದಂತೆ ಹೇಗಾಗುತ್ತದೆ? ಎಂದು ತಿರುಗೇಟು ನೀಡಿದ್ದಾರೆ.

Exit mobile version