Site icon PowerTV

ವರ್ಗಾವಣೆಗೊಂಡ ಶಿಕ್ಷಕನಿಗೆ ಕಣ್ಣೀರ ವಿದಾಯ

ಕೊಪ್ಪಳ : ಶಿಕ್ಷಕರ ವರ್ಗಾವಣೆ ಹಿನ್ನೆಲೆ ಶಾಲಾ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತ ಬೀಳ್ಕೊಟ್ಟಿರುವ ಸನ್ನಿವೇಶ ಕುಷ್ಟಗಿ ತಾಲೂಕಿನ ಮನ್ನೆರಾಳ ಗ್ರಾಮದಲ್ಲಿ ನಡೆದಿದೆ.

ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದ ಸಿದ್ದರಾಮ ಬಾಮನಿ ಎಂಬುವವರು ಹಲವು ವರ್ಷಗಳಿಂದ ಮನ್ನೇರಾಳ ಗ್ರಾಮದ ಪ್ರೌಢಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇಂದು ತಳುವಗೇರಿಯ ಆದರ್ಶ ವಿದ್ಯಾಲಯಕ್ಕೆ ವರ್ಗಾವಣೆ ಆಗಿದ್ದಾರೆ.

ಇದನ್ನು ಓದಿ : ಮತ್ತೆ ಮೋದಿ ಬಂದ್ರೆ ಕಾಂಗ್ರೆಸ್ ಸರ್ಕಾರ ಉಳಿಯಲ್ಲ : ಆರ್. ಅಶೋಕ್

ಸಿದ್ದರಾಮ ಅವರು ಶಾಲೆಯಲ್ಲಿ ಇಂಗ್ಲಿಷ್ ಪಾಠವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಪಾಠ ಮಾಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿ, ಮಕ್ಕಳಿಗೆ ಒಳ್ಳೇಯ ಮಾರ್ಗದರ್ಶನವನ್ನು ಮಾಡುತ್ತಿದ್ದರು. ಈ ಹಿನ್ನೆಲೆ ಸಿದ್ದರಾಮ ಅವರ ವರ್ಗಾವಣೆಯಿಂದ ಮಕ್ಕಳ ಮನಸ್ಸಿಗೆ ತುಂಬಾ ಬೇಸರ ತಂದಿದೆ.

ಶಾಲೆಯಿಂದ ಶಿಕ್ಷಕ ಸಿದ್ಧರಾಮ ಅವರನ್ನು ಬೀಳ್ಕೋಡುಗೆ ಸಂದರ್ಭದಲ್ಲಿ ಎಲ್ಲಾ ಮಕ್ಕಳು ಕಾಲುಮುಗಿದು ಕಣ್ಣೀರು ಹಾಕಿದ ವಿದ್ಯಾರ್ಥಿಗಳು.

Exit mobile version