Site icon PowerTV

ಶೂನ್ಯ ಬಿಲ್.. ಗ್ರಾಹಕರು ಫುಲ್ ಖುಷ್

ಬೆಂಗಳೂರು : ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಗೃಹಜ್ಯೋತಿ ಯೋಜನೆಯ ಮೊದಲ ಕರೆಂಟ್‌ ಬಿಲ್‌ ಬಂದಿದೆ.

33.7 ಲಕ್ಷ ಗ್ರಾಹಕರಿಗೆ ಶೂನ್ಯ ಬಿಲ್ ವಿತರಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಿಂದ ಗ್ರಾಹಕರು ಫುಲ್ ಖುಷಿಯಾಗಿದ್ದಾರೆ.

ಬೆಸ್ಕಾಂ ವ್ಯಾಪ್ತಿಯಲ್ಲಿ 33.7 ಲಕ್ಷ ಶೂನ್ಯ ಬಿಲ್ ವಿತರಣೆ ಮಾಡಲಾಗಿದ್ದು, ಜನರಿಗೆ ಶೂನ್ಯ ಕರೆಂಟ್ ಬಿಲ್ ನೀಡಲಾಗಿದೆ. ಗ್ಯಾರಂಟಿ ಯೋಜನೆಯಡಿ ಇದುವರೆಗೆ 51.25 ಲಕ್ಷ ಗ್ರಾಹಕರಿಗೆ ಕರೆಂಟ್ ಬಿಲ್ ವಿತರಣೆ ಮಾಡಲಾಗುತ್ತಿದ್ದು, ಅದರಲ್ಲಿ 33.07 ಲಕ್ಷ ಮಂದಿಗೆ ಶೂನ್ಯ ಬಿಲ್ ಅನ್ನು ಬೆಸ್ಕಾಂ ಇಲಾಖೆಯಿಂದ ವಿತರಣೆ ಮಾಡಲಾಗಿದೆ.

74 ಲಕ್ಷ ಗ್ರಾಹಕರು ನಿಗದಿಗಿಂತ ಕಡಿಮೆ ಯೂನಿಟ್ ಬಳಕೆ ಮಾಡಿದ್ದಾರೆ. ಮತ್ತು 45.3 ಲಕ್ಷ ಗ್ರಾಹಕರಿಂದ ಸರಾಸರಿಗಿಂತ ಹೆಚ್ಚು ಯೂನಿಟ್ ಬಳಕೆ ಮಾಡಲಾಗಿದೆ. ಕಾಂಗ್ರೆಸ್‌ ಗ್ಯಾರಂಟಿಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಶೂನ್ಯ ಕರೆಂಟ್ ಬಿಲ್ ಪಡೆದ ಗ್ರಾಹಕರು ಫುಲ್ ಖುಷ್ ಆಗಿದ್ದಾರೆ.

Exit mobile version