Site icon PowerTV

ಅಭಿ ತೋ ಎ ಶುರುವಾತ್ ಹೇ.. ಪಿಚ್ಚರ್ ಅಭಿ ಬಾಕಿ ಹೈ : ಸಿನಿಮಾ ಡೈಲಾಗ್ ಹೊಡೆದ ಲಕ್ಷ್ಮಿ ಹೆಬ್ಬಾಳ್ಕರ್

ಚಾಮರಾಜನಗರ : ಅಭಿ ತೋ ಎ ಶುರುವಾತ್ ಹೇ ಪಿಚ್ಚರ್ ಅಭಿ ಬಾಕಿ ಹೈ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಿನಿಮಾ ಡೈಲಾಗ್ ಹೊಡೆದಿದ್ದಾರೆ.

ಚಾಮರಾಜನಗರದ ಡಾ. ರಾಜಕುಮಾರ್ ರಂಗಮಂದಿರದಲ್ಲಿ ಏರ್ಪಡಿಸಿದ್ದ ಗೃಹಲಕ್ಷ್ಮೀ ಯೋಜನೆ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಇದು ಕೇವಲ ಟ್ರೇಲರ್ ಅಷ್ಟೇ, ಪಿಚ್ಚರ್ ಇನ್ನು ಬಾಕಿ ಇದೆ ಎಂದಿದ್ದಾರೆ.

ನಮ್ಮ ಇಲಾಖೆ ಅಧಿಕಾರಿಗಳು ಸನ್ಮಾನ ಮಾಡ್ತಿವಿ ಅಂದ್ರು. ಸನ್ಮಾನ ಸ್ವೀಕರಿಸುವ ಕೆಲಸ ಆಗಸ್ಟ್ 30ರ ನಂತರ ಮಾಡ್ತಿನಿ ಅಂತ ಹೇಳ್ದೆ. ಮಹಿಳಾ ಮತ್ತು ಮಕ್ಕಳ ಇಲಾಖೆ ಕೆಲಸಗಳು ಇನ್ಮುಂದೆ ಶುರು ಆಗ್ತವೆ. ನಮ್ಮ ಸರ್ಕಾರ ಬಂದು ಈಗ 100 ದಿನ ಆಗಿದೆ, ಇನ್ನೂ 5 ವರ್ಷ ಬಾಕಿಯಿದೆ ಎಂದು ಹೇಳಿದ್ದಾರೆ.

ಗೃಹಲಕ್ಷ್ಮೀ ಬರೋದಕ್ಕು, ನಮ್ಮ ತಂದೆ-ತಾಯಿ ನನಗೆ ಲಕ್ಷ್ಮಿ ಅಂತ ಹೆಸರು ಇಟ್ಟಿರೋದಕ್ಕೂ ಸಾಮ್ಯತೆ ಇದೆ. ನಮ್ಮಪ್ಪ, ನಾನೇ ನಾನು ಮಂತ್ರಿ ಆಗ್ತಿನಿ ಅಂತ ಗೊತ್ತಿರಲಿಲ್ಲ. ಆದರೆ, ಬಹಳಷ್ಟು ಹೋರಾಟ ಮಾಡಿ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Exit mobile version