Site icon PowerTV

ನಾನೇನು ಬ್ಯಾನರ್ ಆರ್ಡರ್ ಕೊಟ್ಟಿಲ್ಲ : ಲಕ್ಷ್ಮಿ ಹೆಬ್ಬಾಳ್ಕರ್

ಚಾಮರಾಜನಗರ : ಗೃಹಲಕ್ಷ್ಮೀ ಯೋಜನೆ ಬ್ಯಾನರ್​ನಲ್ಲಿ ಬಿಜೆಪಿ ಮಾಜಿ ಶಾಸಕ ನಿರಂಜನಕುಮಾರ್ ಫೋಟೋ ಅಳವಡಿಕೆ ವಿಚಾರ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹೌದಾ.. ನನ್ನ ಗಮನಕ್ಕೆ ಬಂದಿಲ್ಲ ನನಗೆ ಗೊತ್ತಿಲ್ಲ. ಅಚಾತುರ್ಯದಿಂದ ಆಗಿರಬಹುದು ಎಂದು ಹೇಳಿದ್ದಾರೆ.

ನನ್ನ ಗಮನಕ್ಕೆ ಈಗ ಬಂದಿದೆ, ಅದನ್ನ ಸರಿಪಡಿಸುತ್ತೇವೆ. ನನ್ನ ಗಮನಕ್ಕೆ ಬಂದಿಲ್ಲ, ನಾನೇನು ಬ್ಯಾನರ್ ಆರ್ಡರ್ ಕೊಟ್ಟಿಲ್ಲ. ಯಾರು ಮಾಡಿದ್ದಾರೆ, ಏನು ಆಗಿದೆಯೋ ಅದನ್ನು ಪರಿಶೀಲಿಸಿ ಸರಿಪಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಕಂಡಿಷನ್ ಇಲ್ಲದೆ ಬರುತ್ತಿದ್ದಾರೆ

ಆಪರೇಷನ್ ಹಸ್ತದ ವಿಚಾರವಾಗಿ ಮಾತನಾಡಿ, ಯಾರು ಯಾರಿಗೆ ನಮ್ಮ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದ ಮೇಲೆ ನಂಬಿಕೆ ಇದೆಯೋ, ವಿಶ್ವಾಸ ಇದೆಯೋ ಅಂತವರು ಬರ್ತಾರೆ. ಜನಪರ ಕಾರ್ಯಕ್ರಮ ಕೊಡ್ತಾ ಇರೋ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ. ಯಾವುದೇ ಕಂಡಿಷನ್ ಇಲ್ಲದೆ ಸೇರುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

Exit mobile version