Site icon PowerTV

ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ : ಚಕ್ರಪಾಣಿ ಮಹಾರಾಜ

ದೆಹಲಿ : ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ಮತ್ತು ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್ ಸೈಟ್ ‘ಶಿವಶಕ್ತಿ’ ಯನ್ನು ಅದರ ರಾಜಧಾನಿಯಾಗಿ ಘೋಷಿಸಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ ಕರೆ ನೀಡಿದ್ದಾರೆ.

ಚಂದ್ರಯಾನ -3 ಯಶಸ್ವಿನ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ಬರೆದಿದೆ. ಇಡೀ ದೇಶ ಹೆಮ್ಮೆಪಡುವಂತಹ ಸಾಧನೆ ಮಾಡಿದೆ. ಇದೀಗ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷರ ಆಗ್ರಹವೊಂದನ್ನು ಮಾಡಿದ್ದು ಇತರ ಧರ್ಮಗಳು ಮಾಡುವ ಮೊದಲು ಭಾರತ ಸರ್ಕಾರವು ಚಂದ್ರನ ಮಾಲೀಕತ್ವವನ್ನು ಪ್ರತಿಪಾದಿಸಬೇಕೆಂದು ತಮ್ಮ ಟ್ವಿಟರ್​ ಖಾತೆಯಲ್ಲಿ ವೀಡಿಯೊವೊಂದನ್ನು ಹರಿಬಿಡುವ ಮೂಲಕ ಕರೆ ನೀಡಿದ್ದು, ಚರ್ಚಾಸ್ಪದವಾಗಿದೆ.

ಇದನ್ನೂ ಓದಿ: ಚಕ್ರವರ್ತಿ ಸೂಲಿಬೆಲೆ ವಿರುದ್ದ ಎಫ್​ಐಆರ್​ ದಾಖಲು!

ಚಂದ್ರನನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ಮತ್ತು ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಲ್ಯಾಂಡಿಂಗ್ ಸೈಟ್ ‘ಶಿವಶಕ್ತಿ’ ಯನ್ನು ಅದರ ರಾಜಧಾನಿಯಾಗಿ ಘೋಷಿಸಿ ಎಂದು ಕರೆ ನೀಡಿದ್ದಾರೆ. ಇತರ ಧರ್ಮಗಳು ಮಾಡುವ ಮೊದಲು ಭಾರತ ಸರ್ಕಾರವು ಚಂದ್ರನ ಮಾಲೀಕತ್ವವನ್ನು ಪ್ರತಿಪಾದಿಸಲು ಕರೆ ನೀಡಿದರು ಮತ್ತು ಸಂಸತ್ತು ಈ ನಿಟ್ಟಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.

ಕಳೆದ ವಾರ ಇಸ್ರೋದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಂತರ, ಲ್ಯಾಂಡರ್ ಸ್ಪರ್ಶಿಸಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

Exit mobile version