Site icon PowerTV

ತತ್ಸಮ ತದ್ಬವ ಟ್ರೈಲರ್ ಲಾಂಚ್ ; ಅತ್ತಿಗೆಗೆ ಧ್ರುವ ಸರ್ಜಾ ಸಾಥ್

ಬೆಂಗಳೂರು : ನಟಿ ಮೇಘನಾ ರಾಜ್ ಅವರು ನಟಿಸಿರುವ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಅತ್ತಿಗೆಗೆ ಸಾಥ್ ನೀಡುತ್ತಿರುವ ಧ್ರುವ ಸರ್ಜಾ.

ಚಿರಂಜೀವಿ ಸರ್ಜಾ ಅವರ ಅಗಲಿಕೆಯ ಬಳಿಕ ಮೇಘನಾ ರಾಜ್ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದ, ವಿಶಾಲ್ ಆತ್ರೇಯ ನಿರ್ದೇಶನ ಮಾಡಿರುವ ಹಾಗೂ ಪನ್ನಗಾಭರಣ ಅವರು ನಿರ್ಮಾಣ ಮಾಡಿರುವ ‘ತತ್ಸಮ ತದ್ಬವ’ ಚಿತ್ರ. ಈ ಸಿನಿಮಾದ ಶೂಟಿಂಗ್ ಮುಗಿದಿದ್ದು, ಇನ್ನೇನು ರಿಲೀಸ್ ಹಂತ ತಲುಪಿರುವ ಸಿನಿಮಾ.

ಇದನ್ನು ಓದಿ : ಮನಸ್ತಾಪ ಬಿಟ್ಟು ಒಂದಾದರಾ ದಚ್ಚು-ಕಿಚ್ಚ!: ಸುಮಲತಾ ಜನ್ಮದಿನದಲ್ಲಿ ಭಾಗಿ

ಸೆಪ್ಟೆಂಬರ್ 15ಕ್ಕೆ ವಿಶ್ವದಾದ್ಯಂತ KRG ಮೂಲಕ ರಿಲೀಸ್ ಆಗ್ತಿರೋ ಸಿನಿಮಾ. ಈ ಹಿನ್ನೆಲೆ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಇಂದು ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅತ್ತಿಗೆ ಮೇಘನಾ ರಾಜ್ ಅವರಿಗಾಗಿ ಟ್ರೈಲರ್ ಲಾಂಚ್ ಮಾಡುತ್ತಿರುವ ಧ್ರುವ ಸರ್ಜಾ.

ಈ ಇವೆಂಟ್ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ತತ್ಸಮ ತದ್ಬವ ಟ್ರೈಲರ್ ಕಾರ್ಯಕ್ರಮದಲ್ಲಿ ನಟಿ ಮೇಘನಾ ರಾಜ್, ಧ್ರುವ ಸರ್ಜಾ ಮತ್ತು ಪ್ರಜ್ವಾಲ್ ದೇವರಾಜ್ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದಾರೆ.

Exit mobile version