Site icon PowerTV

ಕಿಚ್ಚ-ದಚ್ಚು ದೋಸ್ತಿ ಬಗ್ಗೆ ಮದರ್ ಇಂಡಿಯಾ ಬಿಚ್ಚು ಮಾತು

ಬೆಂಗಳೂರು : ನಿನ್ನೆ ಸಂಜೆ ಇಂದ ರಾಜ್ಯಾದ್ಯಂತ ಟಾಕ್​ ಆಫ್​ ದಿ ಟೌನ್ ಆಗಿದ್ದ ಕಿಚ್ಚ-ದಚ್ಚು ದೋಸ್ತಿ ವದಂತಿ ಬಗ್ಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ವೈಯಕ್ತಿಕ ಸಮಾರಂಭ. ವೈಯಕ್ತಿಕ ವಿಚಾರವನ್ನು ಈಗ ಮಾತನಾಡೋದಕ್ಕೆ ಇಷ್ಟ ಪಡುವುದಿಲ್ಲ. ಖಂಡಿತ ಅವರೆಲ್ಲ ಕುಟುಂಬ ಅಂತ ಬಂದಾಗ ಎಲ್ಲಾ ಒಂದೇನೆ. ಒಂದೇ ಕುಟುಂಬ ಅನ್ನೋತರ ಇರ್ತಾರೆ. ಇದರ ಬಗ್ಗೆ ನಾನು ಕಮೆಂಟ್ ಮಾಡಲ್ಲ, ಇದು ತುಂಬಾ ಪರ್ಸನಲ್ ವಿಚಾರ ಎಂದು ಹೇಳಿದ್ದಾರೆ.

60 ವರ್ಷ ಅಂದ್ಮೇಲೆ ಜೀವನದ ಅಧ್ಯಾಯ ಮುಗಿದ ಹಾಗೆ. ಇವತ್ತಿನಿಂದ ಹೊಸ ಅಧ್ಯಾಯ ಆರಂಭ ಆಗುತ್ತೆ ಅಂತ ಎಲ್ಲರೂ ಆಶೀರ್ವಾದ ಮಾಡ್ತಿದ್ದಾರೆ. ಖಂಡಿತ ಜನರ ಪ್ರೀತಿ, ಆಶೀರ್ವಾದ ಪಡೀಬೇಕು ಅಂದ್ರೆ ಎಷ್ಟೋ ಜನುಮದ ಪುಣ್ಯ. ಅಂಬರೀಶ್ ಸಂಪಾದನೆ ಮಾಡಿರೋ ಪ್ರೀತಿ ಇವತ್ತು ನಮಗೆ ಆಶೀರ್ವಾದವಾಗಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಈ ವರ್ಷ ನಮಗೆ ತುಂಬಾ ಸ್ಪೆಷಲ್. ಯಾಕಂದ್ರೆ, ಮಗನ ಮದುವೆ ಆಯ್ತು.. ಮನೆಗೆ ಸೊಸೆನೂ ಬಂದಿದ್ದಾಳೆ. ಹೀಗಾಗಿ, ಇದು ಹೊಸ ಚಾಪ್ಟರ್ ಶುರುವಾಗಿದೆ. ಅದೇ ನಮಗೆ ಖುಷಿ ಎಂದು ಸುಮಲತಾ ಸಂತಸ ವ್ಯಕ್ತಪಡಿಸಿದ್ದಾರೆ.

Exit mobile version