Site icon PowerTV

ಹೊಸ ಲೋಗೋದಡಿಯಲ್ಲಿ ಇಂಡಿಯಾ ಮೈತ್ರಿಕೂಟ ಸ್ಪರ್ಧೆ 

ಮುಂಬೈ : 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎದುರಿಸಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ ಬ್ಲಾಕ್‌ನ ಲೋಗೋವನ್ನು ಮುಂದಿನವಾರ ಮುಂಬೈನಲ್ಲಿ ನಡೆಯಲಿರುವ ಒಕ್ಕೂಟದ 2ನೇ ಸಭೆಯಲ್ಲಿ ಅನಾವರಣಗೊಳಿಸಲಾಗುವುದು ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್‌ ರಾವುತ್ ಹಾಗೂ ಕಾಂಗ್ರೆಸ್‌ ಮುಖಂಡ ಅಶೋಕ್ ಚವಾಣ್ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಇಂಡಿಯಾ ಕೂಟದ ಲೋಗೋ ಹೇಗಿರಬೇಕು ಚರ್ಚೆಗಳು ನಡೆಯುತ್ತಿವೆ. ನಾವು 140 ಕೋಟಿ ಭಾರತೀಯರನ್ನು ತಲುಪಲು ಪ್ರಯತ್ನಿಸುತ್ತಿ ದ್ದೇವೆ. ಲೋಗೋ ನಮ್ಮ ದೇಶ, ಅದರ ಏಕತೆ ಯನ್ನು ಸೂಚಿಸುತ್ತದೆ  ಮತ್ತು ಅಗತ್ಯವಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎಂದರು.

ಇದನ್ನೂ ಓದಿ : ಯುವತಿಗೆ ಬಹಿರಂಗವಾಗಿ ಕ್ಷಮೇ ಕೇಳಿದ ನಿರ್ದೇಶಕ ರಾಜ್​ ಬಿ ಶೆಟ್ಟಿ 

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತ 28 ಪ್ರತಿಪಕ್ಷಗಳ ನಾಯಕರು ಅ.31 ಮತ್ತು ಸೆ.1ರಂದು ಉಪನಗರದ ಐಷಾರಾಮಿ ಹೋಟೆಲ್ ಗ್ರಾಂಡ್ ಹಯಾತ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಭೆಯನ್ನು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ದವ್​ ಆಯೋಜಿಸಲಿದ್ದಾರೆ ಎಂದು ರಾವುತ್ ಹೇಳಿದರು.

Exit mobile version